ಲಂಡನ್, ಜ 21 (DaijiworldNews/DB): ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದೇ ಪ್ರಯಾಣ ಮಾಡಿದಕ್ಕಾಗಿ ಪ್ರಧಾನಿ ರಿಷಿ ಸುನಕ್ ಅವರಿಗೆ ಬ್ರಿಟಿಷ್ ಪೊಲೀಸರು ದಂಡ ವಿಧಿಸಿದ್ದಾರೆ.
ರಿಷಿ ಸುನಕ್ ಕಾರಿನಲ್ಲಿ ಉತ್ತರ ಇಂಗ್ಲೆಂಡ್ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಚಿತ್ರೀಕರಣಗೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ರಿಷಿ ಸುನಕ್ ಅವರಿಗೆ ಪೊಲೀಸರು ದಂಡ ವಿಧಿಸಿದರು.
ಸೀಟ್ ಬೆಲ್ಟ್ ಧರಿಸದೆ ಪ್ರಯಾಣಿಸಿದಕ್ಕಾಗಿ 42 ವರ್ಷದ ವ್ಯಕ್ತಿಗೆ ನಾವು ದಂಡ ವಿಧಿಸಿದ್ದೇವೆ ಎಂದು ಲಂಕಾಶೈರ್ ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ.
ಇನ್ನು ಸೀಟ್ ಬೆಲ್ಟ್ ಧರಿಸದೆ ಪ್ರಯಾಣಿಸಿ ಟ್ರಾಫಿಕ್ ನಿಯಮ ಉಲ್ಲಂಘಿಸಿದಕ್ಕಾಗಿ ಕ್ಷಮೆ ಯಾಚಿಸುವುದಾಗಿ ಇದೇ ವೇಳೆ ರಿಷಿ ಸುನಕ್ ಹೇಳಿದ್ದಾರೆ.