ನ್ಯೂಜಿಲೆಂಡ್, ಜ 23( DaijiworldNews/MS): ಅಸಿಂಡಾ ಅರ್ಡೆರ್ನ್ ಅವರು ಮಂಗಳವಾರ ನ್ಯೂಜಿಲೆಂಡ್ನ ಪ್ರಧಾನ ಮಂತ್ರಿಯಾಗಿ ಅಂತಿಮ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಕಣ್ಣೀರಿಡುತ್ತಲೇ ತಮ್ಮ ಕೊನೆಯ ಭಾಷಣ ಮಾಡಿದರು. ಈ ವೇಳೆ ಉತ್ತರಾಧಿಕಾರಿ ಕ್ರಿಸ್ ಹಿಪ್ಕಿನ್ಸ್ ಕೂಡ ಅವರ ಜತೆಗಿದ್ದರು.
ಎಡಪಂಥೀಯರ ಜಾಗತಿಕ ಐಕಾನ್ ಆಗಿರುವ 42 ವರ್ಷದ ಅರ್ಡೆರ್ನ್, ಐದು ವರ್ಷಗಳಿಗೂ ಹೆಚ್ಚು ಪ್ರಧಾನಿಯಾಗಿ ಆಡಳಿತ ನಡೆಸಿದ್ದು, ಏಕಾಏಕಿಯಾಗಿ ಪದತ್ಯಾಗವನ್ನಿ ಘೋಷಿಸಿದ್ದರು . ತಮ್ಮ ನಿರ್ಗಮನವನ್ನು ನಕಾರಾತ್ಮಕ ವ್ಯಾಖ್ಯಾನಿಸಬಾರದು ಎಂದು ಹೇಳಿದ್ದರು.
‘ತಾವು ಪ್ರಧಾನಿ ಹುದ್ದೆಯಲ್ಲಿದ್ದಾಗ ಜನರ ಪ್ರೀತಿ, ಸಹಾನುಭೂತಿ ಮತ್ತು ದಯೆಯನ್ನು ಪಡೆದಿರುವೆ. ಅದು ಎಂದಿಗೂ ಮರೆಯಲಾಗದ ಅನುಭವವಾಗಿದೆ’ ‘ನಾನು ಎಲ್ಲಿಯೂ ಹೋಗುತ್ತಿಲ್ಲ ಮತ್ತು ಆಲ್ಬರ್ಟ್ ಮೌಂಟ್ಗೆ ಸಂಸದೆಯಾಗಿ ಮುಂದುವರಿಯುವೆ. ಆದರೆ ಕೇಂದ್ರ ರಾಜಕೀಯದಿಂದ ದೂರವಿರುವೆ’ ಎಂದು ಅವರು ತಿಳಿಸಿದರು.
"ತಮ್ಮ ರಾಜೀನಾಮೆ ಹಿಂದೆ ಯಾವುದೇ ರಹಸ್ಯ ಇಲ್ಲ ನಾನು ಒಬ್ಬ ಮನುಷ್ಯಳು. ಸುದೀರ್ಘ ಕಾಲದಿಂದ ನಮಗೆ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಶ್ರಮವನ್ನು ನಾವು ನೀಡಿದ್ದೇವೆ. ಈಗ ಸಮಯ ಬಂದಿದೆ. ನನಗೆ ಇದು ನಿರ್ಗಮನದ ಸಮಯ" ಎಂದು ಜನವರಿ 19 ರಂದು ಅರ್ಡೆರ್ನ್ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿದ್ದರು.