ನೈಜೀರಿಯಾ, ಜ 26( DaijiworldNews/MS): ಜನಾಂಗೀಯ ಮತ್ತು ಧಾರ್ಮಿಕ ಉದ್ವಿಗ್ನತೆಗಳಿಗೆ ಕುಖ್ಯಾತ ಮಧ್ಯ ನೈಜೀರಿಯಾದಲ್ಲಿ ಭೀಕರ ಬಾಂಬ್ ಸ್ಪೋಟಗೊಂಡ ಪರಿಣಾಮ 50 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಉತ್ತರ ಮಧ್ಯ ನೈಜೀರಿಯಾದ ನಸರವಾ ಮತ್ತು ಬೆನ್ಯೂ ರಾಜ್ಯಗಳ ನಡುವೆ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಈ ರಾಜ್ಯಗಳ ಗಡಿ ಭಾಗ ರುಕುಬಿ ಬಳಿ ಕುರಿಗಾಹಿಗಳು ತಮ್ಮ ಜಾನುವಾರುಗಳನ್ನು ಮೇಯಿಸಲು ಹೋದ ವೇಳೆಯಲ್ಲಿ ಬಾಂಬ್ ಸ್ಪೋಟಗೊಂಡಿದ್ದು, ಜಾನುವಾರುಗಳು ಸೇರಿದಂತೆ 50 ಕುರಿಗಾಹಿಗಳು ಸಾವನ್ನಪ್ಪಿದ್ದಾರೆ.ಹಲವರಿಗೆ ಗಾಯಗಳಾಗಿವೆ.
ನಸರಾವಾ ಗವರ್ನರ್ ಅಬ್ದುಲ್ಲಾಹಿ ಸುಲೆ, ಸತ್ತವರ ನಿಖರ ಸಂಖ್ಯೆ ತಿಳಿಸಿಲ್ಲದಿದ್ದರೂ, ಕುರಿಗಾಹಿಗಳ ಸಾವಿಗೆ ಬಾಂಬ್ ಸ್ಫೋಟವು ಸಾವಿಗೆ ಎಂದು ತಿಳಿಸಿದ್ದು,
ಸ್ಫೋಟದ ಹಿಂದೆ ಯಾರಿದ್ದಾರೆ ಎಂದು ಇನ್ನು ತಿಳಿದುಬಂದಿಲ್ಲ ಎಂದು ಹೇಳಿದರು.
ಘಟನೆ ನಡೆದ ಸ್ಥಳದಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ.ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.