ನ್ಯೂಯಾರ್ಕ್, ಜ 26( DaijiworldNews/MS): ಜನವರಿ 6, 2021 ರಂದು ನಡೆದ ಅಮೆರಿಕ ಕ್ಯಾಪಿಟಲ್ ಹಿಲ್ ಮೇಲಿನ ದಾಳಿಯ ಬಳಿಕ ಎರಡು ವರ್ಷಗಳ ಅಮಾನತುಗೊಂಡ ನಂತರ ಮುಂಬರುವ ವಾರಗಳಲ್ಲಿ ಮಾಜಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳನ್ನು ಮರುಸ್ಥಾಪಿಸುವುದಾಗಿ ಮೆಟಾ ಪ್ಲಾಟ್ಫಾರ್ಮ್ಸ್ ಬುಧವಾರ ಘೋಷಿಸಿದೆ.
ಈ ಕುರಿತು ಮೆಟಾದ ಜಾಗತಿಕ ವ್ಯವಹಾರಗಳ ಅಧ್ಯಕ್ಷ ಮೆಟಾ ನಿಕ್ ಕ್ಲೆಗ್ ಅವರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ ಬಳಕೆದಾರರಂತೆ ಟ್ರಂಪ್ ಅವರು ಕೂಡ ಮಾನದಂಡಗಳಿಗೆ ಒಳಪಟ್ಟಿರುತ್ತಾರೆ. ನಿಯಮಗಳನ್ನು ಉಲ್ಲಂಘಿಸಿದರೆ ಎಲ್ಲರಂತೆಯೇ ಅವರೂ ದಂಡ ತೆರಬೇಕಾಗುತ್ತದೆ ಕ್ಲೆಗ್ ಹೇಳಿದ್ದಾರೆ.