ವಾಷಿಂಗ್ಟನ್, ಜ 26( DaijiworldNews/MS): ಸದಾ ಸುದ್ದಿಯಲ್ಲಿರುವ ಟ್ವಿಟ್ಟರ್ ಸಿಇಒ ಎಲಾನ್ ಮಸ್ಕ್ ತಮ್ಮ ಟ್ವಿಟರ್ ಖಾತೆಯ ಹೆಸರು ಬದಲಾಯಿಸಿ ತಮ್ಮ ಪಾಲೋವರ್ಸ್ ಗಳನ್ನು ಗೊಂದಲಕ್ಕೀಡುಮಾಡಿದ್ದಾರೆ. ಹೌದು ಎಲಾನ್ ಮಸ್ಕ್ ಬುಧವಾರ ತಮ್ಮ ಟ್ವಿಟ್ಟರ್ ಹೆಸರನ್ನು 'ಮಿ. ಟ್ವೀಟ್' ಆಗಿ ಬದಲಾಯಿಸಿಕೊಂಡಿದ್ದಾರೆ.
"ನನ್ನ ಹೆಸರನ್ನು ಮಿಸ್ಟರ್ ಟ್ವೀಟ್ ಎಂದು ಬದಲಾಯಿಸಿದೆ, ಈಗ ಅದನ್ನು ಮತ್ತೆ ಬದಲಾಯಿಸಲು ಟ್ವಿಟರ್ ನನಗೆ ಅವಕಾಶ ನೀಡುವುದಿಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮಸ್ಕ್ ವಿರುದ್ಧ ಮೊಕದ್ದಮೆ ಹೂಡುತ್ತಿರುವ ಷೇರುದಾರರ ಗುಂಪನ್ನು ಪ್ರತಿನಿಧಿಸುವ ವಕೀಲರು ಸೋಮವಾರದಂದು ನ್ಯಾಯಾಲಯದಲ್ಲಿ ವಾದ ಪ್ರತಿವಾದಗಳ ವೇಳೆ ಆಕಸ್ಮಿಕವಾಗಿ ಎಲಾನ್ ಮಸ್ಕ್ ಅವರನ್ನು "ಮಿಸ್ಟರ್ ಟ್ವೀಟ್" ಎಂದು ಕರೆದಿದ್ದು ಇದನ್ನು ಪತ್ರಕರ್ತರೊಬ್ಬರು ಹಂಚಿಕೊಂಡಿದ್ದರು. ಇದಾದ ಬಳಿಕ ವಿಲಕ್ಷಣ ನಿರ್ಧಾರ , ವಿಚಿತ್ರ ಟ್ವೀಟ್ ಗಳಿಂದ ಹೆಸರುವಾಸಿಯಾಗಿರುವ ಬಿಲಿಯನೇರ್ ಎಲಾನ್ ಮಸ್ಕ್ ಈ ರೀತಿ ಹೆಸರು ಬದಲಾವಣೆ ಮಾಡಿಕೊಂಡಿಡು ಟ್ವೀಟಿಸಿದ್ದಾರೆ.