ಟೋಕಿಯೊ, ಜ 26 (DaijiworldNews/DB): ಟೋಕಿಯೊ-ನರಿಟಾದಿಂದ ದುಬೈಗೆ ತೆರಳುತ್ತಿದ್ದ ವೇಳೆ ಮಹಿಳಾ ಪ್ರಯಾಣಿಕರೋರ್ವರು ವಿಮಾನದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.
ಜನವರಿ 19ರಂದು ಎಮಿರೇಟ್ಸ್ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನ ದುಬೈಗೆ ಆಗಮಿಸಿದ ಬಳಿಕ ತಾಯಿ ಮತ್ತು ಮಗುವನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಯಿತು. ವಿಮಾನ ಸಿಬಂದಿ ಇಬ್ಬರನ್ನೂ ಸುರಕ್ಷಿತವಾಗಿ ನೋಡಿಕೊಂಡರು. ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂದು ಎಮಿರೇಟ್ಸ್ ಮಾಧ್ಯಮವೊಂದಕ್ಕೆ ತಿಳಿಸಿದೆ.
ವೈದ್ಯಕೀಯ ತೊಡಕು ಅಥವಾ ಅತಿ ಕಾಳಜಿ ಅವಶ್ಯವಿರುವವರ ಹೊರತು ಗರ್ಭಿಣಿಯರಿಗೆ ಏಳನೇ ತಿಂಗಳ ಗರ್ಭಾವಸ್ಥೆಯ ಬಳಿಕವೂ ವಿಮಾನದಲ್ಲಿ ಪ್ರಯಾಣಿಸಲು ಎಮಿರೇಟ್ಸ್ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಳೆದ ಮೇ ತಿಂಗಳಲ್ಲಿ ಡೆನ್ವರ್ನಿಂದ ಕೊಲೊರಾಡೊಗೆ ಪ್ರಯಾಣಿಸುತ್ತಿದ್ದ ಫ್ರಾಂಟಿಯರ್ ಏರ್ಲೈನ್ಸ್ ವಿಮಾನದಲ್ಲಿ ಶೌಚಾಲಯದಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು.