ಇಸ್ರೇಲ್, ಫೆ 02 (DaijiworldNews/DB): ಮಗುವಿಗೆ ಟಿಕೆಟ್ ಪಡೆಯದ ದಂಪತಿಯೊಂದು ವಿಮಾನ ಪ್ರಯಾಣಕ್ಕೂ ಮುನ್ನ ಮಗುವನ್ನು ಮಗುವನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ವಿಮಾನ ಹತ್ತಲು ಹೋದ ವಿಲಕ್ಷಣ ಘಟನೆ ಇಸ್ರೇಲ್ನಲ್ಲಿ ನಡೆದಿದೆ.
ಬೆಲ್ಜಿಯಂಗೆ ಪ್ರಯಾಣಿಸಲು ದಂಪತಿಯೊಂದು ತಮ್ಮ ಮಗುವಿನೊಂದಿಗೆ ಟಿಲ್ಅವಿವ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ದಂಪತಿ ಮಗುವಿಗೆ ಟಿಕೆಟ್ ಪಡೆದಿರಲಿಲ್ಲ. ಹೀಗಾಗಿ ವಿಮಾನ ನಿಲ್ದಾಣ ಸಿಬಂದಿ ಮಗುವಿಗೂ ಟಿಕೆಟ್ ಕಡ್ಡಾಯವೆಂದು ಹೇಳಿದ್ದಾರೆ. ಆದರೆ ಪ್ರಯಾಣ ರದ್ದುಪಡಿಸುವು ಅಥವಾ ಮಗುವಿಗೆ ಟಿಕೆಟ್ ಖರೀದಿಸುವುದರ ಬದಲಾಗಿ ಈ ದಂಪತಿ ಮಗುವನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ವಿಮಾನ ಹತ್ತಲು ಹೋಗಿದ್ದಾರೆ. ಇದರಿಂದ ದಿಗಿಲುಗೊಂಡ ವಿಮಾನ ನಿಲ್ದಾಣ ಸಿಬಂದಿ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಭದ್ರತಾ ಸಿಬಂದಿ ಮಗುವನ್ನು ಬಿಟ್ಟು ವಿಮಾನ ಹತ್ತಲು ಮುಂದಾದ ದಂಪತಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.