ಟರ್ಕಿ, ಫೆ (DaijiworldNews/HR): ತಂದೆಯೊಬ್ಬರು ಯುಟ್ಯೂಬರ್ ಆಗಿರುವ ತನ್ನ ಮಗಳು ದೇಶ ತೊರೆಯುತ್ತಾಳೆಂದು ಆಕೆಯನ್ನ ಹತ್ಯೆ ಮಾಡಿರೋ ಘಟನೆ ಟರ್ಕಿಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಟಿಬಾ ಅಲ್-ಅಲಿ (22) ಎಂದು ಗುರುತಿಸಲಾಗಿದೆ.
ಮಗಳು ಇರಾಕ್ ಬಿಟ್ಟು ಟರ್ಕಿಯಲ್ಲೇ ಉಳಿಯಲು ನಿರ್ಧರಿಸಿದ್ದಾಳೆ ಎಂದು ತಂದೆ, ಮಗಳ ಕತ್ತು ಹಿಸುಕಿ ಕೊಂದಿದ್ದು, ಇದು 'ಮರ್ಯಾದಾಗೇಡು ಹತ್ಯೆ' ಎಂದು ತೋರುತ್ತದೆ ಎನ್ನಲಾಗಿದೆ.
ಟರ್ಕಿಯಲ್ಲಿ ಏಕಾಂಗಿಯಾಗಿ ವಾಸಿಸುವ ಆಕೆಯ ನಿರ್ಧಾರದಿಂದ ತಂದೆ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗುತ್ತಿದೆ.