ವಾಷಿಂಗ್ಟನ್, ಫೆ 06 ( DaijiworldNews/MS): ಅಮೇರಿಕಾದ ಭದ್ರತಾ ಸೂಕ್ಷ್ಮ ಪ್ರದೇಶದ ಮೇಲೆ ಕಾಣಿಸಿಕೊಂಡಿದ್ದ ಚೀನಾದ ಅನುಮಾನಾಸ್ಪದ ಪತ್ತೇದಾರಿ ಬಲೂನ್ ಅನ್ನು ಪೆಂಟಗನ್ ನ(ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ) ಫೈಟರ್ ಜೆಟ್ ಶನಿವಾರ ಹೊಡೆದುರುಳಿಸಿದೆ.
ಉತ್ತರ ಅಮೆರಿಕ ಸುತ್ತಲೂ ಇರುವ ಸೂಕ್ಷ್ಮ ಸೇನಾ ನೆಲೆಗಳಲ್ಲಿ ಬಲೂನ್ ಗೂಢಾಚಾರಿಕೆ ಮಾಡುತ್ತಿದೆ ಎಂದು ಕೆಲದಿನಗಳ ಹಿಂದೆ ಅಮೆರಿಕ, ಚೀನಾ ವಿರುದ್ಧ ಆರೋಪ ಮಾಡಿತ್ತು.ಕಾರ್ಯಾಚರಣೆ ಬಳಿಕ ಇದು ಚೀನಾದಿಂದ ಆಗಿರುವ ಅಮೆರಿಕ ಸಾರ್ವಭೌಮತೆಯ ಉಲ್ಲಂಘನೆ ಎಂದು ಪೆಂಟಗನ್ ಹೇಳಿದೆ.
ಈ ಘಟನೆಯ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, "ಇಂದಿನ ಉದ್ದೇಶಪೂರ್ವಕ ಮತ್ತು ಕಾನೂನುಬದ್ಧ ಕ್ರಮ ಆಗಿದೆ" ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಹ ವೈರಲ್ ಆಗಿದ್ದು, ಬಲೂನ್ಗೆ ಶೂಟ್ ಮಾಡಿದಾಗ ಸಣ್ಣದಾಗಿ ಸ್ಫೋಟಗೊಂಡ ಬಲೂನ್ ನೀರಿಗೆ ಬೀಳುವ ದೃಶ್ಯ ಸೆರೆಯಾಗಿದೆ.
ಸದ್ಯ ಹೊಡೆದುರುಳಿಸಲಾಗಿರುವ ಬಲೂಲ್ ಮತ್ತು ಅದರೊಳಗಿನ ಸಾಧನಗಳನ್ನು ಪತ್ತೆ ಮಾಡಲು ಕಾರ್ಯಾಚರಣೆ ಆರಂಭವಾಗಿದೆ ಎಂದು ಪೆಂಟಗನ್ ತಿಳಿಸಿದೆ.