ನೂಡರ್ಗಿ, ಫೆ 06( DaijiworldNews/MS): ದಕ್ಷಿಣ ಟರ್ಕಿಯ ನೂಡರ್ಗಿ ನಗರದಲ್ಲಿ ಸೋಮವಾರ ಬೆಳಿಗ್ಗೆ7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಹಲವು ಕಟ್ಟಡಗಳು ನೆಲಕ್ಕುರುಳಿವೆ.
ಅಮೆರಿಕದ ಭೂವಿಜ್ಞಾನ ಸಂಸ್ಥೆ ಪ್ರಕಾರ ಆರಂಭದಲ್ಲಿ ಭೂಕಂಪವು ಗಾಜಿಯಾಂಟೆಪ್ ಪ್ರಾಂತ್ಯದ ನೂರ್ಡಗಿ ನಗರದಿಂದ 26 ಕಿಮೀ ಪೂರ್ವಕ್ಕೆ 17.9 ಕಿಮೀ ಆಳದಲ್ಲಿ ಸಂಭವಿಸಿದ್ದು, ಆ ಬಳಿಕ 6.7 ರ ತೀವ್ರತೆಯ ಪ್ರಮಾಣದಲ್ಲಿ ಮಧ್ಯ ಟರ್ಕಿಯಲ್ಲಿ 9.9 ಕಿಮೀ ಆಳದಲ್ಲಿ ಕಂಪನ ಉಂಟಾಗಿದೆ ಎಂದು ಹೇಳಿದೆ. ಭೂಕಂಪದ ತೀವ್ರತೆಗೆ ನೆರೆಯ ಸಿರಿಯಾದಲ್ಲೂ ತೀವ್ರ ಹಾನಿಯುಂಟಾಗಿದೆ.
ಹಾನಿಯ ಪ್ರಮಾಣ ಮತ್ತು ಸಾವಿನ ಸಂಖ್ಯೆ ಕುರಿತು ಯಾವುದೇ ಅಧಿಕೃತ ಮಾಹಿತಿ ದೊರಕಿಲ್ಲ. ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ಗಳು ಮತ್ತು ವಿಡಿಯೊಗಳು ಅನೇಕ ಸಾವುನೋವುಗಳನ್ನು ಸೂಚಿಸುತ್ತಿದ್ದು, ಹಲವಾರು ಕಟ್ಟಡಗಳು ನೆಲಸಮಗೊಂಡಿದ್ದು, ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ.