ಗಾಜಿಯಾಂಟೆಪ್, ಫೆ 06 ( DaijiworldNews/MS): ಟರ್ಕಿಯಲ್ಲಿ ಇಂದು ಸಂಭವಿಸಿದ ಪ್ರಬಲ ಭೂಕಂಪದಿಂದ ಅಪಾರ ಸಾವು-ನೋವು ಸಂಭವಿಸಿದ್ದು, ಸದ್ಯದ ಮಾಹಿತಿಯಂತೆ ಆಗ್ನೇಯ ಟರ್ಕಿಯ ಗಾಜಿಯಾಂಟೆಪ್ನಲ್ಲಿ 53, ಸಿರಿಯಾದಲ್ಲಿ 42 ಸೇರಿ ಒಟ್ಟು 95ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಪ್ರಾಣ ಕಳೆದುಕೊಂಡವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ. ಹಲವೆಡೆ ಬೃಹತ್ ಕಟ್ಟಡ ಕುಸಿದು ಬಿದ್ದಿದ್ದು, ಅನೇಕರು ಅವಶೇಷಗಳಡಿ ಸಿಲುಕಿದ್ದಾರೆ. ತೀವ್ರ ಕಂಪನಕ್ಕೆ ಗ್ಯಾಸ್ ಪೈಪ್ಲೈನ್ ಒಡೆದು ಹೋಗಿ ಬೆಂಕಿ ಆವರಿಸಿಕೊಂಡು ಅನಾಹುತ ಸೃಷ್ಟಿಸಿದೆ.
7.8 ತೀವ್ರತೆಯ ಪ್ರಬಲ ಭೂಕಂಪದ ಬಳಿಕ ಸುಮಾರು 10 ನಿಮಿಷಗಳ ನಂತರ ಬಲವಾದ 6.7 ಕಂಪನವು ಸ್ಥಳೀಯರಲ್ಲಿ ಭೀತಿಯನ್ನು ಹೆಚ್ಚಿಸಿದೆ
ಟರ್ಕಿಯಲ್ಲಿ ಮಾತ್ರವಲ್ಲದೇ ಸೈಪ್ರಸ್, ಟರ್ಕಿಯೆ, ಗ್ರೀಸ್, ಜೋರ್ಡಾನ್, ಲೆಬನಾನ್, ಸಿರಿಯಾ, ಯುನೈಟೆಡ್ ಕಿಂಗ್ಡಮ್, ಇರಾಕ್ ಮತ್ತು ಜಾರ್ಜಿಯಾದಲ್ಲಿಯೂ ಭೂಕಂಪನದ ಅನುಭವವಾಗಿದೆ.