ಟರ್ಕಿ, ಫೆ 07 (DaijiworldNews/HR): ಟರ್ಕಿಯಲ್ಲಿ ಭೂಕಂಪಗಳು ಸಂಭವಿಸಿದ ನಂತರ ದೇಶಕ್ಕೆ ಸಹಾಯಹಸ್ತ ಚಾಚಿದ ಭಾರತವನ್ನು 'ಅಗತ್ಯಕ್ಕಾಗುವ ಸ್ನೇಹಿತ ನಿಜವಾಗಿಯೂ ಸ್ನೇಹಿತ' ಎಂದು ಟರ್ಕಿಯ ರಾಯಭಾರಿ ಫಿರತ್ ಸುನೆಲ್ ಅವರು ಭಾರತದಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಫಿರತ್ ಸುನೆಲ್, ದೋಸ್ತ್ ಎಂಬುದು ಟರ್ಕಿಶ್ ಮತ್ತು ಹಿಂದಿಯಲ್ಲಿ ಸಾಮಾನ್ಯ ಪದವಾಗಿದೆ. ದೋಸ್ತ್ ಕರ ಗುಂಡೆ ಬೆಲ್ಲಿ ಓಲುರ್ (ಅಗತ್ಯಕ್ಕಾಗುವ ಸ್ನೇಹಿತ ನಿಜವಾಗಿಯೂ ಸ್ನೇಹಿತ) ಎಂಬ ಟರ್ಕಿಶ್ ಗಾದೆಯಿದೆ, ಭಾರತಕ್ಕೆ ತುಂಬಾ ಧನ್ಯವಾದಗಳು ಎಂದಿದ್ದಾರೆ.
ಇನ್ನು ವಿಶೇಷ ತರಬೇತಿ ಪಡೆದ ಶ್ವಾನ ದಳ ಮತ್ತು ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಯನ್ನು ಒಳಗೊಂಡ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್ಡಿಆರ್ಎಫ್) ಯ ಎರಡು ತಂಡಗಳು ಭೂಕಂಪ ಪೀಡಿತ ಪ್ರದೇಶಕ್ಕೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಭಾರತದಿಂದ ಕಳುಹಿಸಲಾಗಿದೆ.