ಇಸ್ಲಾಮಾಬಾದ್, ಫೆ 11 (DaijiworldNews/HR): ನಮಲ್ಲಿ ಭೂಕಂಪ ಉಂಟಾಗಿ ಸಮಸ್ಯೆಯಾಗಿದ್ದು, ಅದು ಪರಿಹಾರವಾಗುವವರೆಗೆ ಬರಬೇಡಿ ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಶಹಬಾಜ್ ಷರೀಫ್ ಗೆ ಟರ್ಕಿ ಹೇಳಿರುವುದಾಗಿ ವರದಿಯಾಗಿದೆ.
ಪಾಕಿಸ್ತಾನ ಪ್ರಧಾನಮಂತ್ರಿ ಶಹಬಾಜ್ ಷರೀಫ್
ಈಗಾಗಲೇ ಪ್ರಮುಖ ರಾಷ್ಟ್ರಗಳು ಭೂಕಂಪದಿಂದ ನೊಂದಿರುವ ಟರ್ಕಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಪರಿಹಾರ ತಂಡಗಳನ್ನು ಕಳುಹಿಸಿದೆ.
ಇನ್ನು ಪಾಕಿಸ್ತಾನ ಪ್ರಧಾನಿ ಟರ್ಕಿಗೆ ತೆರಳಿ, ಸಾಂತ್ವನ ಹೇಳುವ ಮೂಲಕ ವಿತ್ತೀಯ ನೆರವು ಪಡೆದುಕೊಳ್ಳಲು ಸಾಧ್ಯವೇ ಎಂಬ ಬಗ್ಗೆ ಚಿಂತನೆ ನಡೆಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಟರ್ಕಿ ಪ್ರಧಾನಿ ಆಪ್ತ ವಲಯ ನಮ್ಮ ಸರಕಾರಕ್ಕೆ ಈಗ ವಿದೇಶಿ ಅತಿಥಿಗಳ ಆತಿಥ್ಯ ವಹಿಸುವ ಸಂಯಮವಿಲ್ಲ, ಪರಿಹಾರ ಸಿಬಂದಿಯನ್ನು ಮಾತ್ರ ಕಳುಹಿಸಿ ಎಂದಿದೆ.