ನವದೆಹಲಿ, ಫೆ 13 (DaijiworldNews/HR): ಭೂಕಂಪ ಪೀಡಿತ ಟರ್ಕಿ ಹಾಗೂ ಸಿರಿಯಾಗೆ ಭಾರತದಿಂದ ಎನ್ಡಿಆರ್ಎಫ್ ರಕ್ಷಣಾ ತಂಡದೊಂದಿಗೆ ಶ್ವಾನದಳವನ್ನು ರವಾನಿಸಲಾಗಿದ್ದು, ಆರು ವರ್ಷದ ಬಾಲಕಿಯನ್ನು ರಕ್ಷಿಸಲು ಎನ್ಡಿಆರ್ಎಫ್ನ ಶ್ವಾನದಳ ನೆರವಾಗಿರುವ ಘಟನೆ ನಡೆದಿದೆ.
ಯಂತ್ರೋಪಕರಣಗಳು ವೈಫಲ್ಯ ಕಂಡ ಜಾಗದಲ್ಲಿ ರೊಮಿಯೋ ಮತ್ತು ಜೂಲಿ ಎಂಬ ಶ್ವಾನ ಜೋಡಿ ಮೂಸುತ್ತಾ ಅವಶೇಷಗಳಡಿಯಲ್ಲಿ ಬಾಲಕಿ ಇರುವುದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಇನ್ನು ಟರ್ಕಿಯಲ್ಲಿ ಫೆಬ್ರುವರಿ 6ರಂದು ಪ್ರಬಲ ಭೂಕಂಪ ಸಂಭವಿಸಿದ್ದು, 30ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.