ಬ್ರೆಜಿಲ್, ಫೆ 19 (DaijiworldNews/DB): ಬೆನ್ನಿನಲ್ಲಿ 6 ಸೆಂಟಿ ಮೀಟರ್ ಬಾಲದೊಂದಿಗೆ ಜನಿಸಿದ ಹೆಣ್ಣು ಮಗುವೊಂದಕ್ಕೆ ಬ್ರೆಜಿಲ್ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಬಾಲವನ್ನು ತೆಗೆದು ಹಾಕಿದ್ದಾರೆ. ಸದ್ಯ ಆಕೆ ನಡೆಯಲು ಶಕ್ತಳಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಈ ಮಗುವಿನ ತಾಯಿಗೆ ಸಿಸೇರಿಯನ್ ನಡೆಸಿ ಹೆರಿಗೆ ಮಾಡಿಸಲಾಗಿತ್ತು. ಮಗು ಜನಿಸಿದಾಗ ಅದರ ಬೆನ್ನಿನಲ್ಲಿ 6 ಸೆಂಟಿ ಮೀಟರ್ ಬಾಲ ಇರುವುದನ್ನು ನೋಡಿ ವೈದ್ಯರೇ ಚಕಿತಗೊಂಡಿದ್ದರು. ಮಗುವಿನ ಬೆನ್ನುಮೂಳೆ ಮತ್ತು ಸೊಂಟ ಸಂಧಿಸುವ ಪ್ರದೇಶದ ಬಳಿಯಲ್ಲಿ ಈ ಬಾಲ ಪತ್ತೆಯಾಗಿತ್ತು.
ಮಗುವಿಗೆ ದೀರ್ಘಾವಧಿಯ ಚಿಕಿತ್ಸೆ ನೀಡಲಾಗಿತ್ತು. ಮೂತ್ರನಾಳದ ಸೋಂಕಿನಿಂದ ಬಳಲುತ್ತಿತ್ತು. ಪ್ರಸ್ತುತ ಮಗುವಿಗೆ ಮೂರು ವರ್ಷವಾಗಿದ್ದು, ಶಸ್ತ್ರಚಿಕಿತ್ಸೆ ಮುಖಾಂತರ ಯಶಸ್ವಿಯಾಗಿ ಬಾಲವನ್ನು ತೆಗೆದು ಹಾಕಲಾಗಿದೆ. ಸದ್ಯ ಆಕೆ ನಡೆಯಲು ಶಕ್ತಳಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.