ಉಕ್ರೀನ್, ಫೆ 20 (DaijiworldNews/HR): ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ದಿಢೀರನೆ ಯುದ್ಧಪೀಡಿತ ಉಕ್ರೇನ್ಗೆ ಭೇಟಿ ನೀಡಿದ್ದು, ಅವರ ಫೋಟೋ ಮತ್ತು ವೀಡಿಯೊಗಳು ವೈರಲ್ ಆಗುತ್ತಿವೆ.
ರಾಜಧಾನಿ ಕೀವ್ಗೆ ಬಂದಿಳಿದ ಬೈಡೆನ್ ಅವರನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸ್ವಾಗತಿಸಿದ್ದು, ಕೀವ್ನ ಬೀದಿಗಳಲ್ಲಿ ಇಬ್ಬರೂ ನಾಯಕರು ಕಾಣಿಸಿಕೊಂಡಿದ್ದಾರೆ.
ಫೆಬ್ರವರಿ 22ರವೇಳೆಗೆ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್, ಪೋಲೆಂಡ್ಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ಪ್ರಧಾನಿ ಮಾಟೆಸ್ಜ್ ಮೊರಾವಿಕಿ ಅವರೊಂದಿಗೆ ಅಮೆರಿಕ ಪಡೆಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲಿದ್ದಾರೆ. ಆದರೆ ಅದಕ್ಕೂ ಮುನ್ನ ಬೈಡೆನ್ ಉಕ್ರೇನ್ಗೆ ಭೇಟಿ ನೀಡಿರೋದು ತೀವ್ರ ಕುತೂಹಲ ಕೆರಳಿಸಿದೆ.