ಢಾಕಾ, ಫೆ 21 (DaijiworldNews/HR): ಬಾಂಗ್ಲಾದೇಶದ ಢಾಕಾ ವಿವಿಯಲ್ಲಿ ವಿದ್ಯಾರ್ಥಿಗಳು ಸ್ಥಾಪಿಸಿದ್ದ, ರವೀಂದ್ರನಾಥ್ ಟ್ಯಾಗೋರ್ ಅವರ ಕಾಣೆಯಾಗಿದ್ದ ಪ್ರತಿಮೆ ಭಗ್ನಗೊಂಡಿರುವ ಘಟನೆ ನಡೆದಿದೆ.
ವಿವಿಯ ಕಲಾ ವಿಭಾಗದ ವಿದ್ಯಾರ್ಥಿಗಳು ಟ್ಯಾಗೋರ್ ಅವರ ಪ್ರತಿಮೆಯನ್ನು ಫೆ.14ರಂದು ಸ್ಥಾಪಿಸಿದ್ದು, ಅದರಲ್ಲಿ ಪ್ರತಿಮೆಯ ಬಾಯಿಗೆ ಟೇಪ್ ಕಟ್ಟಿ, ಕೈನಲ್ಲಿರುವ ಗೀತಾಂಜಲಿಗೆ ಮೊಳೆ ಹೊಡೆಯುವ ಮೂಲಕ, ವಾಕ್ ಸ್ವಾತಂತ್ರ್ಯ ದಮನಗೊಳಿಸುತ್ತಿರುವುದರ ವಿರುದ್ಧ ಪ್ರತಿಭಟಿಸಲಾಗಿತ್ತು.
ಇನ್ನು ಫೆ.16ರಂದು ಪ್ರತಿಮೆ ರಾತ್ರೋ ರಾತ್ರಿ ಕಾಣೆಯಾಗಿದ್ದು, ಬಳಿಕ 2 ಕಿ.ಮೀ.ದೂರದಲ್ಲಿ ಭಗ್ನಗೊಂಡ ಪ್ರತಿಮೆ ಸಿಕ್ಕಿದೆ.