ಕೊಲಂಬೋ, ಫೆ 22 (DaijiworldNews/MS) : ಆರ್ಥಿಕ ದಿವಾಳಿತನಕ್ಕೊಳಗಾಗಿರುವ ಶ್ರೀಲಂಕಾ, ಬ್ಯಾಲೆಟ್ ಪತ್ರಗಳ ಮುದ್ರಣಕ್ಕೆ ಹಣವಿಲ್ಲದೇ ಮುಂದಿನ ತಿಂಗಳು ನಡೆಯಲಿರುವ ಸ್ಥಳೀಯ ಚುನಾವಣೆಗಳನ್ನು ಮುಂದೂಡಿದೆ.
ಮಂಗಳವಾರದಂದು ಚುನಾವಣೆ ಮುಂದೂಡಿರುವ ಕ್ರಮವನ್ನು ವಿರೋಧಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿದ್ದು, ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಸಂಸತ್ ಕಲಾಪವನ್ನು ಮುಂದೂಡಲಾಯಿತು.
ಮಾ.09 ರಂದು ನಡೆಯಬೇಕಿದ್ದ ಚುನಾವಣೆಯನ್ನು ಅಧ್ಯಕ್ಷ ರಣಿಲ್ ವಿಕ್ರಮಸಿಂಘೆ ಅವರಿಗೆ ಸತ್ವಪರೀಕ್ಷೆ ಎಂದೇ ವಿಶ್ಲೇಷಿಸಲಾಗುತ್ತಿತ್ತು. ಶ್ರೀಲಂಕಾದ ಆರ್ಥಿಕ ಸ್ಥಿತಿ ತೀವ್ರ ಕುಸಿತ ಎದುರಿಸಿದ್ದಾಗ ಜುಲೈ ನಲಿ ವಿಕ್ರಮಸಿಂಘೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಚುನಾವಣಾ ಆಯೋಗ ನ್ಯಾಯಾಲಯಕ್ಕೆ ಸಲ್ಲಿಸಿದ ಮಾಹಿತಿ ಪ್ರಕಾರ, ಮತಯಂತ್ರಗಳ ಮುದ್ರಣ, ಇಂಧನ ಅಥವಾ ಮತಗಟ್ಟೆಗಳಿಗೆ ಪೊಲೀಸ್ ರಕ್ಷಣೆಗೆ ಹಣವನ್ನು ನೀಡಲು ಖಜಾನೆ ನಿರಾಕರಿಸಿದೆ.
ಚುನಾವಣಾ ಆಯೋಗ ಕೋರ್ಟ್ ಗೆ ನೀಡಿರುವ ಮಾಹಿತಿಯ ಪ್ರಕಾರ, ಮತಪತ್ರಗಳ ಮುದ್ರಣ, ಇಂಧನ ಅಥವಾ ಮತಗಟ್ಟೆಗಳಿಗೆ ಪೊಲೀಸ್ ರಕ್ಷಣೆಗೆ ಹಣವನ್ನು ಬಿಡುಗಡೆ ಮಾಡಲು ಖಜಾನೆ ನಿರಾಕರಿಸಿದೆ.
"ಚುನಾವಣೆ ಸಮಯಕ್ಕೆ ಸರಿಯಾಗಿ ನಡೆಯಲಿದೆ ಎಂದು ನಾನು ಇತ್ತೀಚೆಗೆ ಸುಪ್ರೀಂ ಕೋರ್ಟ್ಗೆ ಭರವಸೆ ನೀಡಿದ್ದೆ.ಆದರೆ, ಸರ್ಕಾರವು ಅಗತ್ಯ ಹಣವನ್ನು ಬಿಡುಗಡೆ ಮಾಡದ ಕಾರಣ ನಾವು ಅದನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ನಾನು ಈಗ ನ್ಯಾಯಾಲಯಕ್ಕೆ ತಿಳಿಸುತ್ತಿದ್ದೇನೆ ಚುನಾವಣಾ ಆಯೋಗದ ಮುಖ್ಯಸ್ಥ ನಿಮಲ್ ಪುಂಚಿಹೇವಾ ತಿಳಿಸಿದ್ದಾರೆ.