ಇಟಲಿ, ಫೆ 27 (DaijiworldNews/MS): ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯ ಮಧ್ಯಭಾಗ ತುಂಡಾಗಿ ಮುಳುಗಿದ ಪರಿಣಾಮ 59 ಮಂದಿ ಮೃತರಾದ ಘಟನೆ ಇಟಲಿಯ ದಕ್ಷಿಣ ಕರಾವಳಿ ಸಮುದ್ರದಲ್ಲಿ ಕ್ರೋಟೋನ್ ನಗರದ ಬಳಿ ನಡೆದಿದೆ.
ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ದೋಣಿಯಲ್ಲಿ 100ಕ್ಕೂ ಹೆಚ್ಚು ವಲಸಿಗರು ಪ್ರಯಾಣಿಸುತ್ತಿದ್ದರು. ಭೀಕರ ಅಲೆಗಳ ಹೊಡೆತಕ್ಕೆ ಸಿಲುಕಿದ ಪರಿಣಾಮ ದೋಣಿಯ ಮಧ್ಯಭಾಗ ತುಂಡಾಗಿ, ದೋಣಿ ಎರಡು ಭಾಗವಾಯಿತು. ಈ ಅವಘಡದಲ್ಲಿ ಮೃತಪಟ್ಟ ವಲಸಿಗರ ಪೈಕಿ ಕೆಲವೇ ತಿಂಗಳ ಮಗು ಹಾಗೂ 12 ಮಕ್ಕಳು ಸೇರಿದ್ದಾರೆ.
ಕರಾವಳಿ ಪಡೆ, ಗಡಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಹಲವರನ್ನು ರಕ್ಷಿಸಿದ್ದಾರೆ.
ಬಡತನ ಹಾಗೂ ಬದುಕಿನ ಸಂಘರ್ಷದಿಂದ ಬೇಸತ್ತ ಆಫ್ರಿಕಾ ಜನರು ಯುರೋಪ್ನಲ್ಲಿ ಒಳ್ಳೆಯ ಜೀವನ ನಡೆಸಬಹುದೆಂದು ಸಮುದ್ರ ಮಾರ್ಗದಲ್ಲಿಅಪಾಯಕರ ರೀತಿಯಲ್ಲಿ ಇಟಲಿ ಮೂಲಕ ಹಾದು ಬರುವುದು ಬಹುದೊಡ್ದ ಸಮಸ್ಯೆಯಾಗಿದೆ.