ಟೆಹ್ರಾನ್, ಫೆ 28 (DaijiworldNews/DB): ಮಹಿಳೆಯರು ಶಿಕ್ಷಣ ಪಡೆಯುವುದನ್ನು ತಡೆಯುವ ಸಲುವಾಗಿ ಶಾಲಾ ವಿದ್ಯಾರ್ಥಿನಿಯರಿಗೆ ವಿಷ ಉಣಿಸಿದ ಘಟನೆ ಇರಾನ್ನಲ್ಲಿ ವ್ಯಾಪಕವಾಗಿ ನಡೆಯುತ್ತಿವೆ.
ಶರಿಯಾ ಕಠಿಣ ನಿರ್ಬಂಧಗಳನ್ನು ಮಹಿಳೆಯರ ಮೇಲೆ ಹೇರಲು ಇರಾನ್ನಲ್ಲಿ ಪ್ರಯತ್ನಗಳು ನಡೆಯುತ್ತಲೇ ಇದೆ. ಇದೀಗ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೇ ವಿಷ ಉಣಿಸುವ ಹಂತಕ್ಕೂ ಹೋಗಲಾಗಿದೆ.
ಕಳೆದ ನವೆಂಬರ್ ತಿಂಗಳಿನಿಂದಲೇ ಇರಾನ್ನ ಕೋಮ್ ನಗರದಲ್ಲಿ ಇಂತಹ ವಿವಿಧ ಪ್ರಕರಣಗಳು ದಾಖಲಾಗಿವೆ. ವಿದ್ಯಾರ್ಥಿನಿಯರು ಶಿಕ್ಷಣ ಪಡೆಯದಂತೆ ತಡೆಯುವುದು, ಬಾಲಕಿಯರ ಶಾಲೆಗಳನ್ನು ಮುಚ್ಚಿಸುವ ನಿಟ್ಟಿನಲ್ಲಿ ಕೆಲವು ದುಷ್ಕರ್ಮಿಗಳು ಇಂತಹ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಜಾಬ್ ಧರಿಸದಕ್ಕೆ ಆಡಳಿತಾಧಿಕಾರಿಗಳ ಥಳಿತಕ್ಕೊಳಗಾಗಿ ಯುವತಿಯೊಬ್ಬಳು ಮೃತಪಟ್ಟ ಘಟನೆ ಕಳೆದ ವರ್ಷ ಇರಾನ್ನಲ್ಲಿ ನಡೆದಿತ್ತು. ಇದಕ್ಕೆ ಇರಾನ್ ಮಾತ್ರವಲ್ಲದೆ, ಹೊರ ದೇಶಗಳಲ್ಲಿಯೂ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು.