ಇಸ್ಲಾಮಾಬಾದ್, ಮಾ 09 (DaijiworldNews/DB): ಪಾಕಿಸ್ತಾನದಲ್ಲಿ ಚರ್ಮರೋಗ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಹಿಂದೂ ವೈದ್ಯನನ್ನು ಚಾಲಕನೊಬ್ಬ ಕತ್ತು ಸೀಳಿ ಹತ್ಯೆಗೈದ ಘಟನೆ ನಡೆದಿದೆ.
ಪಾಕಿಸ್ತಾನದ ಹೈದರಾದ್ನಲ್ಲಿ ಚರ್ಮರೋಗ ವೈದ್ಯರಾಗಿದ್ದ ಧರಮ್ ದೇವ್ ರಾಠಿ ಅವರು ಹತ್ಯೆಯಾದವರು. ಆರೋಪಿ ಚಾಲಕ ಹನೀಫ್ ಲೆಘರಿ ಎಂದು ಗುರುತಿಸಲಾಗಿದೆ. ಆತನನ್ನು ಖೈರ್ಪುರದ ಆತನ ಮನೆಯಿಂದ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ವೈದ್ಯ ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಚಾಲಕ ಮತ್ತು ವೈದ್ಯನ ನಡುವೆ ಗಲಾಟೆ ಉಂಟಾಗಿತ್ತು. ಮನೆಗೆ ತಲುಪಿದ ಕೂಡಲೇ ಅಡುಗೆ ಮನೆಗೆ ನುಗ್ಗಿದ ಚಾಲಕ ಚಾಕು ತೆಗೆದುಕೊಂಡು ವೈದ್ಯನ ಕತ್ತು ಸೀಳಿದ್ದಾನೆ. ಬಳಿಕ ಅದೇ ಕಾರಿನಲ್ಲಿ ಪರಾರಿಯಾಗಿದ್ದಾನೆ ಎಂದು ವೈದ್ಯರ ಮನೆಯ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ತಿಳಿಸಿರುವುದಾಗಿ ವರದಿಯಾಗಿದೆ.