ಅಮೇರಿಕಾ, ಮಾ 17 (DaijiworldNews/HR): ಲಾರೆನ್ಸ್ ಪಾಲ್ ಆಂಡರ್ಸನ್ ಎಂಬಾತ ಆಂಡ್ರಿಯಾ ಬ್ಲಾಂಕೆನ್ಶಿಪ್ ಎಂಬಾಕೆಯನ್ನು ಕೊಂದು ಆಕೆಯ ಹೃದಯ ಹೊರ ತೆಗೆದು ಅದನ್ನು ಬೇಯಿಸಿ ಕುಟುಂಬದವರಿಗೆ ಬಡಿಸಿ 4 ವರ್ಷದ ಮಗು ಸೇರಿದಂತೆ ಇಬ್ಬರನ್ನು ಕೊಂದ ಅಮೆರಿಕದ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
44 ವರ್ಷದ ಲಾರೆನ್ಸ್ ಪಾಲ್ ಆಂಡರ್ಸನ್ ಎಂಬಾತ ಜೈಲಿನಿಂದ ಬಿಡುಗಡೆಯಾದ ಒಂದು ತಿಂಗಳ ನಂತರ ಈ ಕೊಲೆ ಕೃತ್ಯವೆಸಗಿದ್ದಾನೆ.
ಬಡುಗಡೆಯಾದ ವಾರಗಳ ನಂತರ ಆಂಡರ್ಸನ್, ಆಂಡ್ರಿಯಾ ಬ್ಲಾಂಕೆನ್ಶಿಪ್ ಎಂಬಾಕೆಯನ್ನು ಕೊಂದು ಆಕೆಯ ಹೃದಯ ಹೊರ ತೆಗೆದಿದ್ದ. ಅದನ್ನು ತನ್ನ ಚಿಕ್ಕಮ್ಮ ಮತ್ತು ಚಿಕ್ಕಪ್ಪನ ಮನೆಗೆ ಕೊಂಡೊಯ್ದು ಆಲೂಗಡ್ಡೆ ಜತೆ ಬೇಯಿಸಿದ್ದ. ನಂತರ ಅದನ್ನು ಆ ದಂಪತಿಗಳಿಗೆ ಉಣಬಡಿಸಲು ಯತ್ನಿಸಿದ್ದ. ಇದಾದ ನಂತರ 67 ವರ್ಷದ ಲಿಯಾನ್ ಪೇಯ್ ಮತ್ತು ಅವರ 4 ವರ್ಷದ ಮೊಮ್ಮಗಳು ಕೆಯೋಸ್ ಯೇಟ್ಸ್ ನ್ನು ಇರಿದು ಕೊಲೆ ಮಾಡಿದ್ದ ಎಂದು ವರದಿಯಾಗಿದೆ.