ಉತ್ತರ ಕೊರಿಯಾ, ಮಾ 20 (DaijiworldNews/MS): ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ಅಮೇರಿಕಾ ಮತ್ತು ದಕ್ಷಿಣ ಕೊರಿಯಾ ವಿರುದ್ಧ ಪರಮಾಣು ದಾಳಿಗೆ ಸನ್ನದ್ಧರಾಗಲು ಕರೆ ನೀಡಿದ್ದಾರೆ. ವಾರ್ ಗೇಮ್ ಪ್ಲಾನ್ ಗಳನ್ನು ತಡೆಗಟ್ಟಲು ಯಾವುದೇ ಸಂದರ್ಭದಲ್ಲೂ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಮೇರಿಕಾ ಮತ್ತು ದಕ್ಷಿಣ ಕೊರಿಯಾ ದೇಶಗಳು ಪರಮಾಣು ಆಸ್ತಿಗಳನ್ನು ಒಳಗೊಂಡ ಜಂಟಿ ಮಿಲಿಟರಿ ಡ್ರಿಲ್ ಗಳನ್ನು ವಿಸ್ತರಿಸುತ್ತಿವೆ. ಈ ಬಗ್ಗೆ ಕಿಡಿಕಾರಿರುವ ಕಿಮ್ ತಕ್ಷಣ ಮತ್ತು ಅಗಾಧ ಪ್ರಮಾಣದ ಪರಮಾಣು ಪ್ರತಿದಾಳಿಗೆ ಕರೆ ನೀಡಿದ್ದಾರೆ.
ಉಭಯ ದೇಶಗಳ ಮಿಲಿಟರಿ ಡ್ರಿಲ್ ಗೆ ಉತ್ತರವಾಗಿ, ಉತ್ತರ ಕೊರಿಯಾ ಸಮರಾಭ್ಯಾಸ ನಡೆಸಿದ್ದು, ಇದರೊಂದಿಗೆ ಪರಮಾಣು ಸಿಡಿತಲೆ ಹೊಂದಿರುವ ಬ್ಯಾಲಸ್ಟಿಕ್ ಕ್ಷಿಪಣಿಯನ್ನು ಉಡಾಯಿಸಿ ಪರೀಕ್ಷೆ ನಡೆಸಿದೆ.