ನ್ಯೂಯಾರ್ಕ್ , ಮಾ 21 (DaijiworldNews/MS): ಮಾಧ್ಯಮ ಕ್ಷೇತ್ರದ ದಿಗ್ಗಜ ರೂಪರ್ಟ್ ಮುರ್ಡೋಕ್ ತಮ್ಮ 92ನೇ ವಯಸ್ಸಿನಲ್ಲಿ ಐದನೇ ಮದುವೆಯಾಗುತ್ತಿದ್ದಾರೆ.
ಆನ್ ಲೆಸ್ಸಿ ಸ್ಮಿತ್ (66) ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಇವರ ಪತಿ ಚೆಸ್ಟರ್ ಸ್ಮಿತ್ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ನೀವು ನ್ಯೂಯಾರ್ಕ್ ಪೋಸ್ಟ್ ಗೆ ಹೇಳಿಕೆ ನೀಡುವ ರೂಪರ್ಟ್, " ನಾನು ತುಂಬಾ ನರ್ವಸ್ ಆಗಿದ್ದು ನನಗೆ ನಿಜಕ್ಕೂ ಮತ್ತೊಮ್ಮೆ ಪ್ರೀತಿಯಲು ಬೀಳಲು ಭಯವಾಗುತ್ತಿತ್ತು. ಆದರೂ ಇದು ನನ್ನ ಕೊನೆಯ ಪ್ರೀತಿ ಎಂದು ನನಗೆ ಗೊತ್ತಿದೆ" ಎಂದಿದ್ದಾರೆ
ಮುರ್ಡೋಕ್ ತನ್ನ ಮೊದಲ ಮೂರು ಹೆಂಡತಿಯರಿಂದ ಆರು ಮಕ್ಕಳನ್ನು ಹೊಂದಿದ್ದಾರೆ. ಕಳೆದ ವರ್ಷ ನಾಲ್ಕನೇ ಪತ್ನಿಗೆ ವಿಚ್ಛೇದನ ನೀಡಿದ್ದರು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಇಬ್ಬರೂ ಭೇಟಿಯಾಗಿದ್ದರು. ಬೇಸಿಗೆಯಲ್ಲಿ ಇಬ್ಬರೂ ಮದುವೆಯಾಗುವ ಸಾಧ್ಯತೆ ಇದೆ.