ಟುನೀಶಿಯಾ, ಮಾ 26 (DaijiworldNews/DB): ಆಫ್ರಿಕನ್ ನಿರಾಶ್ರಿತರು ಹಾಗೂ ವಲಸಿಗರನ್ನು ಕೊಂಡೊಯ್ಯುತ್ತಿದ್ದ ದೋಣಿ ಮುಳುಗಿ ಕನಿಷ್ಠ 19 ಮಂದಿ ಸಾವನ್ನಪ್ಪಿದ ಘಟನೆ ಟುನೀಶಿಯಾದಲ್ಲಿ ನಡೆದಿದೆ.
ಇಟಲಿ ಕಡೆಗೆ ಈ ದೋಣಿ ತೆರಳುತ್ತಿತ್ತು ಎನ್ನಲಾಗಿದೆ. ಆಫ್ರಿಕನ್ ನಿರಾಶ್ರಿತರು ಹಾಗೂ ವಲಸಿಗರು ಈ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ದೋಣಿಯಲ್ಲಿ ಎಷ್ಟು ಮಂದಿ ಇದ್ದರೆಂಬ ಮಾಹಿತಿ ಲಭ್ಯವಾಗಿಲ್ಲ. ಕನಿಷ್ಠ19 ಮಂದಿ ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಕಳೆದ ನಾಲ್ಕು ದಿನಗಳ ಅಂತರದಲ್ಲಿ ನಿರಾಶ್ರಿತರನ್ನು ಸಾಗಿಸುತ್ತಿದ್ದ ಒಟ್ಟು ಐದು ದೋಣಿಗಳು ದಕ್ಷಿಣ ನಗರ ಸ್ಫ್ಯಾಕ್ಸ್ ನಲ್ಲಿ ಮುಳುಗಿದ್ದು, 67 ಮಂದಿ ಈವರೆಗೆ ನಾಪತ್ತೆಯಾಗಿದ್ದಾರೆ. ಮಾರ್ಚ್ 24ರ ಶುಕ್ರವಾರ ಮುಳುಗಿದ್ದ ದೋಣಿಯಲ್ಲಿದ್ದವರ ಪೈಕಿ 34 ಮಂದಿ ನಾಪತ್ತೆಯಾಗಿದ್ದರು ಎಂದು ವರದಿಯಾಗಿದೆ.