ಕೆನಾಡ, ಏ 01 (DaijiworldNews/HR): ಕಾನೂನುಬಾಹಿರವಾಗಿ ಕೆನಾಡದಿಂದ ಅಮೇರಿಕಾಗೆ ಅಕ್ರಮವಾಗಿ ದೋಣಿಯ ಮೂಲಕ ಪ್ರಯಾಣಿಸುತ್ತಿದ್ದ 8 ಮಂದಿ ಸೇಂಟ್ ಲಾರೆನ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ರೊಮೇನಿಯನ್ ಮೂಲದ ಕೆನಡಾದ ಪ್ರಜೆ, ಭಾರತ ಮೂಲದ ವಯಸ್ಕ ಮಹಿಳೆ ಸೇರಿದಂತೆ ಎರಡು ಕುಟುಂಬದ 6 ಮಂದಿ ಸೇರಿದಂತೆ ಒಟ್ಟು 8 ಮಂದಿ ದೋಣಿಯ ಮೂಲಕ ಕೆನಾಡದಿಂದ ಅಕ್ರಮವಾಗಿ ಅಮೇರಿಕಾ ಪ್ರವೇಶಿಸಲು ಯತ್ನಿಸಿದ್ದಾರೆ.
ಇನ್ನು ಹೆಲಿಕಾಪ್ಟರ್ ಮೂಲಕ ಎರಡು ಶವಗಳನ್ನು ಪೊಲೀಸರು ಪತ್ತೆ ಹಚ್ಚಲಾಗಿದ್ದು, ವೈಮಾನಿಕ ಶೋಧ ನಡೆಸಿದಾಗ ಮೊದಲ ಶವ ಪತ್ತೆಯಾಗಿದೆ.
ಘಟನೆಯಲ್ಲಿ ಒಂದು ಮಗು 3 ವರ್ಷಕ್ಕಿಂತ ಕೆಳಗಿನದಾಗಿದ್ದು, ಮಗುವಿನ ಬಳಿ ಕೆನಡಾದ ಪಾಸ್ಪೋರ್ಟ್ ಇತ್ತು ಎಂದು ವರದಿ ತಿಳಿಸಿದೆ.