ಕ್ಯಾಲಿಫೋರ್ನಿಯಾ, ಏ 02 (DaijiworldNews/MS): ಮೊಬೈಲ್ ಜಗತ್ತನ್ನು ಅತಿಯಾಗಿ ಆವರಿಸಿಕೊಂಡಿದ್ದು, ಈಗ ಬಗ್ಗೆ ಸ್ವತಃ "ಮೊಬೈಲ್ ಜನಕ" ಮಾರ್ಟಿನ್ ಕೂಪರ್ ಬೇಸರ ವ್ಯಕ್ತಪಡಿಸಿದ್ದಾರೆ.
"ಸೆಲ್ ಫೋನ್ನ ಪಿತಾಮಹ" ಎಂದು ಕರೆಯಲ್ಪಡುವ ಮಾರ್ಟಿನ್ ಕೂಪರ್ ಮಾಧ್ಯಮ ಹೇಳಿಕೆಯೊಂದರ ಮೂಲಕ ಮಾತನಾಡಿರುವ ಅವರು, ಇಂದಿನ ದಿನಗಳಲ್ಲಿ ಮೊಬೈಲ್ಗಳ ಗಾತ್ರ ಚಿಕ್ಕದಾಗಿದೆ. ಆದರೆ, ಅವುಗಳ ಅತಿರೇಕದ ಬಳಕೆ ನನ್ನನ್ನು ಘಾಸಿಗೊಳಿಸಿದೆ ಎಂದು ನೋವನ್ನು ಹೊರಹಾಕಿದ್ದಾರೆ.
ಮಾರ್ಟಿನ್ ಕೂಪರ್ಗೆ ಈಗ 94 ವರ್ಷವಾಗಿದ್ದು, 'ಯಾರೋ ಮೊಬೈಲ್ ನೋಡುತ್ತಾ ರಸ್ತೆ ದಾಟುತ್ತಿರುವುದನ್ನು ನೋಡಿ ಬೇಸರವಾಯಿತು' ಎಂದ ಅವರು ಫೋನ್ ಬಳಕೆಯನ್ನು ಕಡಿಮೆ ಮಾಡಲು ಅವರು ಜನರಿಗೆ ಸಲಹೆ ನೀಡಿದ್ದಾರೆ.'ನನ್ನ ಆವಿಷ್ಕಾರವೊಂದು ಜನರ ಸಾಮಾನ್ಯ ಜ್ಞಾನವನ್ನೇ ಕಿತ್ತುಕೊಳ್ಳುತ್ತಿದೆ ಎಂದು ನನಗೆ ಭಾಸವಾಗುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದರ ನಡುವೆಯೂ 'ಸಮಾಜದಲ್ಲಿ ಧನಾತ್ಮಕವಾಗಿ ಪರಿವರ್ತನೆ ತರುವಲ್ಲಿ ಮೊಬೈಲ್ ಫೋನ್ ಅಗಾಧವಾದ ಸಾಮರ್ಥ್ಯವನ್ನು ಹೊಂದಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.