ನ್ಯೂಯಾರ್ಕ್, ಏ 05 (DaijiworldNews/MS): ಲೈಂಗಿಕ ಹಗರಣ ಮುಚ್ಚಿಡಲು ಪೋರ್ನ್ ಸ್ಟಾರ್ಗೆ ಹಣ ನೀಡಿದ್ದ ಪ್ರಕರಣದಲ್ಲಿಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (76) ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಇದಕ್ಕೂ ಮುನ್ನ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಟ್ರಂಪ್ ಮ್ಯಾನ್ಹಾಟನ್ ಕೋರ್ಟ್ಗೆ ಮಂಗಳವಾರ ರಾತ್ರಿ ಶರಣಾಗಿದ್ದರು. ಅಮೆರಿಕದ ಇತಿಹಾಸದಲ್ಲೇ ಕ್ರಿಮಿನಲ್ ಆರೋಪ ಪ್ರಕರಣದ ವಿಚಾರಣೆ ಎದುರಿಸಿದ ಹಾಗೂ ಬಂಧನಕ್ಕೆ ಒಳಗಾದ ಮೊದಲ ಅಧ್ಯಕ್ಷ ಟ್ರಂಪ್ ಆಗಿದ್ದಾರೆ.
ಬಂಧನದ ಹಿನ್ನಲೆ ನ್ಯೂಯಾರ್ಕ್ನಲ್ಲಿ ಗಲಭೆ ನಡೆಯಬಹುದು ಎಂಬ ಅನುಮಾನದ ಮೇರೆಗೆ ಹೈ ಅಲರ್ಟ್ ಘೋಷಿಸಲಾಗಿದೆ.
2016ರ ಅಮೆರಿಕ ಚುನಾವಣೆ ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ "ನಮ್ಮ ನಡುವಿನ ಅನೈತಿಕ ಸಂಬಂಧ ಬಹಿರಂಗಪಡಿಸಬಾರದು’ ಎಂದು ನೀಲಿಚಿತ್ರ ತಾರೆಯೊಬ್ಬರಿಗೆ ಹಣ ಸಂದಾಯ ಮಾಡಿದ್ದ ಕುರಿತಂತೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಟ್ರಂಪ್ 2024ರ ಅಧ್ಯಕ್ಷೀಯ ಚುನಾವಣೆ ಸಿದ್ಧತೆಯಲ್ಲಿದ್ದು, ಎರಡನೇ ಬಾರಿ ಸ್ಪರ್ಧೆಗಿಳಿದಿದ್ದು, ಈ ಬೆಳವಣಿಗೆ ಅಮೆರಿಕದ ರಾಜಕೀಯದ ಮೇಲೆ ಪರಿಣಾಮ ಬೀಳಲಿದೆ.