ವಾಷಿಂಗ್ಟನ್, ಏ 22 (DaijiworldNews/HR): ಅಮೇರಿಕಾದ ರಕ್ಷಣಾ ಖಾತೆಯ ಉಪ ಸಚಿವೆಯಾಗಿ ಭಾರತ ಮೂಲದ ರಾಧಾ ಅಯ್ಯಂಗಾರ್ ಪ್ಲಂಬ್ ನೇಮಕಗೊಂಡಿದ್ದಾರೆ.
ರಾಧಾ ಅವರು ರಕ್ಷಣಾ ಸಚಿವಾಲಯದ ಸಿಬ್ಬಂದಿ ಮುಖ್ಯಸ್ಥರಾಗಿದ್ದು, ಸೆನೆಟ್ನಲ್ಲಿ 68-30 ಮತಗಳೊಂದಿಗೆ ನೇಮಕ ದೃಢಪಟ್ಟಿದೆ.
ಇನ್ನು ರಕ್ಷಣಾ ಸಚಿವಾಲಯದ ಹುದ್ದೆಗಳಿಗೂ ಮುನ್ನ ರಾಧಾ ಅವರು ಗೂಗಲ್ನಲ್ಲಿ ಭದ್ರತಾ ಸುರಕ್ಷತೆ ವಿಭಾಗ, ಫೇಸ್ಬುಕ್ನಲ್ಲಿ ನೀತಿ ವಿಶ್ಲೇಷಣೆಯ ಜಾಗತಿಕ ಮುಖ್ಯಸ್ಥರಾಗಿದ್ದರು.