ನೇಪಾಳ, ಏ 28 (DaijiworldNews/HR): ಶುಕ್ರವಾರ ಬೆಳಗಿನ ಜಾವ ಎರಡು ಗಂಟೆಯೊಳಗೆ ನೇಪಾಳದ ಬಾಜುರಾದ ದಹಕೋಟ್ ನಲ್ಲಿ ಎರಡು ಭೂಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಮೊದಲ ಭೂಕಂಪವು ರಿಕ್ಟರ್ ಮಾಪಕದಲ್ಲಿ 4.8 ರಷ್ಟಿತ್ತು, ರಾತ್ರಿ 11:58 ಕ್ಕೆ (ಸ್ಥಳೀಯ ಕಾಲಮಾನ) ಸಂಭವಿಸಿದೆ, ನಂತರ ಶುಕ್ರವಾರ ಮುಂಜಾನೆ 1:30 ಕ್ಕೆ 5.9 ರ ತೀವ್ರತೆಯೊಂದಿಗೆ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಇನ್ನು ನೇಪಾಳದ ಸುರ್ಖೇತ್ ಜಿಲ್ಲೆಯ ಭೂಕಂಪನ ಕೇಂದ್ರದ ಅಧಿಕಾರಿ ರಾಜೇಶ್ ಶರ್ಮಾ ಅವರು ಎರಡು ಭೂಕಂಪಗಳು ಪರಸ್ಪರ ಎರಡು ಗಂಟೆಗಳ ಅಂತರದಲ್ಲಿ ಸಂಭವಿಸಿವೆ ಎಂದು ಹೇಳಿದ್ದಾರೆ.