ವುಹಾನ್, ಮೇ 04 (DaijiworldNews/MS): ಕೊರೊನಾ ಸಾಂಕ್ರಮಿಕದ ಬಗ್ಗೆ ಮೊದಲು ಮಾಹಿತಿ ನೀಡಿ ಎಚ್ಚರಿಸಿದ್ದ ಫಾಂಗ್ ಬಿನ್ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾರೆ.
ಕಳೆದ ಭಾನುವಾರ ಏಪ್ರಿಲ್ 30 ರಂದು ಅವರನ್ನು ಚೀನಾ ಸರ್ಕಾರ ಬಿಡುಗಡೆ ಮಾಡಿದ್ದು, ಇದನ್ನು ಫಾಂಗ್ ಅವರ ಕುಟುಂಬ ವರದಿ ಮಾಡಿದೆ.
2019ರ ಆರಂಭದಲ್ಲಿ ವುಹಾನ್ನಲ್ಲಿ ಸೋಂಕು ಉಂಟಾಗಿರುವ ಬಗ್ಗೆ ದಾಖಲೀಕರಣ ಮಾಡಿ, ಸರಕಾರಕ್ಕೆ ಮಾಹಿತಿ ನೀಡಿದ್ದರು. ಅಲ್ಲದೇ ಕೋವಿಡ್ -19 ಸಾಂಕ್ರಾಮಿಕವು ಚೀನಾದ ವುಹಾನ್ನಿಂದ ಮತ್ತು ಚೀನಾದ ಆಚೆಗೂ ಹರಡುತ್ತಿದೆ ಎಂದು ಎಚ್ಚರಿಸಿದ್ದರು.
ಫೆ1, 2020 ರಂದು, ವುಹಾನ್ ಆಸ್ಪತ್ರೆಯ ಮುಂದೆ ಮಿನಿವ್ಯಾನ್ನ ಹಿಂಭಾಗದಲ್ಲಿ ಶವಗಳ ರಾಶಿಯನ್ನು ತೋರಿಸುವ ಹೊಸ ವೀಡಿಯೊವನ್ನು ಫಾಂಗ್ ಬಿಡುಗಡೆ ಮಾಡಿದರು ಇದಾದ ಬಳಿಕ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ಆಸ್ಪತ್ರೆ ಸಿಬಂದಿ ಜತೆಗೆ ಜಗಳ ಮಾಡಿದ್ದಾರೆ ಎಂಬ ಆರೋಪ ಹೊರಿಸಿ ಅವರನ್ನು ಚೀನ ಸರಕಾರ ಜೈಲಿಗೆ ತಳ್ಳಿತ್ತು.
ಬಿಡುಗಡೆ ಬಳಿಕ ಚೀನಾದ ಪತ್ರಕರ್ತ ಫಾಂಗ್ ಬಿನ್ ತಮ್ಮ ಸಂಬಂಧಿಕರು ಭೇಟಿ ಮಾಡಲು ಬೀಜಿಂಗ್ಗೆ ತೆರಳಿ ಸೋಮವಾರ ಬೆಳಿಗ್ಗೆ ವುಹಾನ್ಗೆ ಮರಳಿದರು. ಮೂಲಗಳ ಪ್ರಕಾರ, ಚೀನಾದ ಅಧಿಕಾರಿಗಳು ಇನ್ನೂ ಅವರ ಚಲನವಲನ ಮತ್ತು ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದಾರೆ.