ಉಗಂಡಾ, ಮೇ 16 (DaijiworldNews/MS): ಭಾರತೀಯ ಮೂಲದ ಬ್ಯಾಂಕರ್ ನನ್ನು ತಾನು ಕದ್ದ ತಂದ ಎಕೆ-47 ಅಸಾಲ್ಟ್ ರೈಫಲ್ ನಿಂದ ಕರ್ತವ್ಯದಲ್ಲಿಲ್ಲದ ಪೊಲೀಸ್ ಓರ್ವ ಗುಂಡಿಕ್ಕಿ ಕೊಂದ ಭೀಕರ ಘಟನೆ ಉಗಾಂಡಾದ ರಾಜಧಾನಿ ಕಂಪಲಾದಲ್ಲಿ ನಡೆದಿದೆ.
ಮೃತರನ್ನು39 ವರ್ಷದ ಉತ್ತಮ್ ಭಂಡಾರಿ ಎಂದು ಗುರುತಿಸಲಾಗಿದೆ ಪೊಲೀಸ್ ಪೇದೆ 30 ವರ್ಷದ ಇವಾನ್ ವಾಬ್ವೈರ್ ಬಂಧಿತ ಆರೋಪಿಯಾಗಿದ್ದಾನೆ.
ಮೇ 12 ರಂದು ಈ ಘಟನೆ ನಡೆದಿದ್ದು, ಕಂಪಾಲಾದ ಪಾರ್ಲಿಮೆಂಟರಿ ಅವೆನ್ಯೂದ ರಾಜಾ ಚೇಂಬರ್ ನಲ್ಲಿ ಉತ್ತಮ್ ಲೇವಾದೇವಿದಾರರಾಗಿದ್ದರು. 2.1 ಮಿಲಿಯನ್ ಶಿಲ್ಲಿಂಗ್ (ರೂ. 46,000) ಸಾಲಕ್ಕಾಗಿ ಈ ಹತ್ಯೆ ನಡೆದಿದೆ. ಗುಂಡಿಕ್ಕಿ ಕೊಂದಿರುವ ಘಟನೆ ಕೊಠಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ.
ಮೇ 12 ರಂದು ಸಾಲ ಮರುಪಾವತಿ ಮೊತ್ತವನ್ನು ತಿಳಿಸಿದಾಗ, ಆರೋಪಿ ಪೊಲೀಸ್ ವಾನ್ ವಾಬ್ವೈರ್ ಕೋಪಗೊಂಡು ವಾಗ್ವಾದ ಮಾಡಿ ಹತ್ಯೆಗೈದಿದ್ದಾನೆ. ಆರೋಪಿ ವಾಬ್ವೈರ್ಗೆ ಮಾನಸಿಕ ಅಸ್ವಸ್ಥನಾಗಿದ್ದ ಕಾರಣ ಆರು ವರ್ಷಗಳ ಕಾಲ ಬಂದೂಕು ಹೊಂದದಂತೆ 2018 ರಲ್ಲಿ ನಿಷೇಧಿಸಲಾಗಿತ್ತು ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್, ಜೆಫ್ರಿ ತುಮುಸಿಮೆ ಕಟ್ಸಿಗಾಜಿ ಅವರು ಉಗಾಂಡಾದಲ್ಲಿರುವ ಭಾರತೀಯ ಸಮುದಾಯವನ್ನು ಭೇಟಿ ಮಾಡಿ ಅವರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಆನ್ಲೈನ್ ನ್ಯೂಸ್ ಪೋರ್ಟಲ್ ನೈಲ್ ಪೋಸ್ಟ್ ತಿಳಿಸಿದೆ.