ಅಮೇರಿಕಾ, ಮೇ 23 (DaijiworldNews/HR): ವಯಸ್ಸಾಗದಂತೆ ತಡೆಯಲು 45ರ ಬಿಲಿಯನೇರ್ ಉದ್ಯಮಿ ವಿಚಿತ್ರ ಸಾಹಸಕ್ಕೆ ಕೈ ಹಾಕಿದ್ದು ಇದಕ್ಕಾಗಿ ಪ್ರತಿ ವರ್ಷ ಸುಮಾರು 2 ಮಿಲಿಯನ್ ಡಾಲರ್ ಖರ್ಚು ಮಾಡುತ್ತಿದ್ದಾರೆ.
ಚಿರಯೌವನ ಬಯಸಿರುವ 45 ವರ್ಷದ ಸಾಫ್ಟ್ವೇರ್ ಉದ್ಯಮಿ ಬ್ರಿಯಾನ್ ಜಾನ್ಸನ್ ಅವರು ತನ್ನ 18 ವರ್ಷದ ಮಗ ಟಾಲ್ಮೇಜ್ ಮತ್ತು 70 ವರ್ಷದ ತಂದೆ ರಿಚರ್ಡ್ ಜೊತೆ ಮೂರು ತಲೆಮಾರುಗಳ ರಕ್ತ ವಿನಿಮಯ ಮಾಡಿಕೊಂಡಿದ್ದಾರೆ. ತನ್ನ ಮಗನ ರಕ್ತವನ್ನು ತಾನು ಪಡೆದು ತನ್ನ ರಕ್ತವನ್ನು ತಂದೆ ನೀಡುವ ಮೂಲಕ ವಿನಿಮಯ ಮಾಡಿಕೊಂಡಿದ್ದಾರೆ.
ಏಪ್ರಿಲ್ನಲ್ಲಿ ಈ ಮೂವರು ಟೆಕ್ಸಾಸ್ನ ಆರ್ಲಿಂಗ್ಟನ್ನಲ್ಲಿರುವ ಫ್ಯೂಚರಿಸ್ಟಿಕ್-ಲುಕಿಂಗ್ ಮೆಡಿಕಲ್ ಸ್ಪಾ ರಿಸರ್ಜೆನ್ಸ್ ವೆಲ್ನೆಸ್ಗೆ ಭೇಟಿ ನೀಡಿ ಮಗನಿಂದ ತಂದೆಗೆ ರಕ್ತವನ್ನು ಮರುಪೂರಣ ಮಾಡುವ ಪ್ರಕ್ರಿಯೆ ಅನುಸರಿಸಿದ್ದಾರೆ. ಅಂದರೆ ಜಾನ್ಸನ್ ಅವರ 18 ವರ್ಷದ ಮಗ ಟಾಲ್ಮೇಜ್ ತನ್ನ ಒಂದು ಲೀಟರ್ ರಕ್ತವನ್ನು ತೆಗೆದು ಅದರ ವಿವಿಧ ಭಾಗಗಳನ್ನು (ಪ್ಲಾಸ್ಮಾ, ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ಲೆಟ್)ಗಳನ್ನು ಕಡಿಮೆ ಮಾಡಲಾಯಿತು. ಜಾನ್ಸನ್ ಅವರು ಇದೇ ರೀತಿ ಮಾಡಿಕೊಂಡು ಮಗನ ಪ್ಲಾಸ್ಮಾ ತಾನು ಪಡೆದು ತನ್ನ ಪ್ಲಾಸ್ಮಾ 70 ವರ್ಷದ ತಂದೆ ರಿಚರ್ಡ್ ರಕ್ತನಾಳಗಳಿಗೆ ವರ್ಗಾಯಿಸಿಕೊಂಡಿದ್ದಾರೆ.
ಬ್ರಿಯಾನ್ ಜಾನ್ಸನ್ ಅವರು ವಯಸ್ಸಾಗುವುದನ್ನು ತಡೆಗಟ್ಟಲು ಮಾಡುತ್ತಿರುವ ವಿಚಾರಗಳಿಗೆ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ.
ಜಾನ್ಸನ್ ಅವರು ತಮ್ಮ ಎಪಿಜೆನೆಟಿಕ್ ವಯಸ್ಸನ್ನು ಕಡಿಮೆ ಮಾಡಿಕೊಳ್ಳಲು "ಪ್ರಾಜೆಕ್ಟ್ ಬ್ಲೂಪ್ರಿಂಟ್" ಎಂಬ ಯೋಜನೆ ಹಾಕಿಕೊಂಡಿದ್ದು ಕಟ್ಟುನಿಟ್ಟಾಗಿ ದಿನಚರಿ ಸಸ್ಯಾಹಾರಿ ಆಹಾರ ಕ್ರಮವನ್ನು ಅನುಸರಿಸುತ್ತಾರೆ. ಒಂದು ಗಂಟೆ ವ್ಯಾಯಾಮ ಮಾಡುತ್ತಾರೆ. ದಿನಕ್ಕೆ 1,977 ಕ್ಯಾಲೊರಿಗಳನ್ನು ಸೇವಿಸುತ್ತಾರೆ. ಪ್ರತಿ ರಾತ್ರಿ ಸಮಯಕ್ಕೆ ಸರಿಯಾಗಿ ಮಲಗುತ್ತಾರೆ. ಬೆಳಗ್ಗೆ 5 ಗಂಟೆಗೆ ಎರಡು ಡಜನ್ ಸಪ್ಲಿಮೆಂಟ್ಸ್ ಮತ್ತು ಕ್ರಿಯೇಟೈನ್ ಮತ್ತು ಕಾಲಜನ್ ಪೆಪ್ಟೈಡ್ಗಳೊಂದಿಗೆ ಗ್ರೀನ್ ಜ್ಯೂಸ್ ಸೇವಿಸುತ್ತಾರೆ. ಪ್ರಾಜೆಕ್ಟ್ ಬ್ಲೂಪ್ರಿಂಟ್ ನಲ್ಲಿ 30 ವೈದ್ಯರು ಮತ್ತು ವೈದ್ಯಕೀಯ ತಜ್ಞರ ತಂಡವನ್ನು ಹೊಂದಿದ್ದು, ಅವರು ಪ್ರಸ್ತುತ ಅವರ ದೇಹದ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಜಾನ್ಸನ್ ಅವರ ಪ್ರತಿಯೊಂದು ಅಂಗಗಳಲ್ಲಿ ವಯಸ್ಸಾದ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸಲು ಸಹಾಯ ಮಾಡಲು ಕೆಲಸ ಮಾಡುತ್ತಿದ್ದಾರೆ
45ನೇ ವಯಸ್ಸಿನಲ್ಲಿಯೂ ಜಾನ್ಸನ್ 5.1 ವರ್ಷಗಳಷ್ಟು ಕಡಿಮೆ ಅಂದರೆ ಅವರ ಪ್ರತಿ ಅಂಗವು 35 ವಯಸ್ಸಿನವರಂತೆ ಇದೆಯಂತೆ.!