ಕೆನಡಾ, ಮೇ 29 (DaijiworldNews/HR): ಕೆನಡಾದಲ್ಲಿ ಪಂಜಾಬ್ ಮೂಲದ ಗ್ಯಾಂಗ್ಸ್ಟರ್ ನನ್ನು ಮದುವೆಯ ರಿಸೆಪ್ಷನ್ ಸಮಯದಲ್ಲಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ದರೋಡೆಕೋರನನ್ನು ಅಮರ್ಪ್ರೀತ್ ಸಮ್ರಾ (28) ಎಂದು ಗುರುತಿಸಲಾಗಿದೆ.
ಪಂಜಾಬ್ ಮೂಲದ ವ್ಯಕ್ತಿಯನ್ನು ಕೆನಡಾದ ವ್ಯಾಂಕೋವರ್ ನಗರದ ಮದುವೆ ಮನೆಯಲ್ಲಿ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದು, ಸ್ಥಳೀಯ ಪತ್ರಿಕೆ ವ್ಯಾಂಕೋವರ್ ಸನ್ನಲ್ಲಿನ ವರದಿಯ ಪ್ರಕಾರ, ಅಮರ್ಪ್ರೀತ್ (ಚುಕ್ಕಿ) ಸಮ್ರಾ ಫ್ರೇಸರ್ ಸ್ಟ್ರೀಟ್ನಲ್ಲಿ ಪಾರ್ಟಿಯಲ್ಲಿ ಭಾಗವಹಿಸಲು ಹೋಗಿದ್ದರು.
ಪೊಲೀಸರ ಪ್ರಕಾರ, ಅಮರ್ಪ್ರೀತ್ ಸಮ್ರಾ ಅವರ ಹಿರಿಯ ಸಹೋದರ ರವೀಂದರ್ ಕೂಡ ಗ್ಯಾಂಗ್ಸ್ಟರ್ ಆಗಿದ್ದು, ಇಬ್ಬರೂ ಆರತಕ್ಷತೆ ಕಾರ್ಯಕ್ರಮಕ್ಕಾಗಿ ಇಲ್ಲಿಗೆ ಬಂದಿದ್ದರು ಎನ್ನಲಾಗಿದೆ.