ಅಮೆಜಾನ್, ಜೂ 11 (DaijiworldNews/HR): ತಾಯಿಯೊಬ್ಬಳು ಕೊಲಂಬಿಯಾದಿಂದ ತನ್ನ ನಾಲ್ಕು ಮಕ್ಕಳ ಜತೆಗೆ ಸಣ್ಣ ವಿಮಾನದಲ್ಲಿ ಜಾಲಿ ರೈಡ್ಗೆಂದು ಹೋಗಿದ್ದಾಗ ತಾಂತ್ರಿಕ ದೋಷದಿಂದಾಗಿ ವಿಮಾನ ಅಪಘಾತಕ್ಕೀಡಾಗಿ ತಾಯಿ ಮೃತಪಟ್ಟು ನಾಲ್ಕು ಮಕ್ಕಳು ಬದುಕುಳಿದಿರುವ ಘಟನೆ ನಡೆದಿದೆ.
ವಿಮಾನ ಅಪಘಾತಕ್ಕೀಡಾದಾಗ ವಿಮಾನವನ್ನು ಹುಡುಕುತ್ತಾ ಬಂದ ರಕ್ಷಣಾ ಸಿಬ್ಬಂದಿಗೆ ತಾಯಿಯ ಶವ ದೊರೆತಿತ್ತು. ಹಾಗಾದರೆ ಮಕ್ಕಳೇನಾದರು ಎಂದು ಹುಡುಕುತ್ತಿದ್ದಾಗ ಅರ್ಧ ತಿಂದ ಹಣ್ಣು, ಮಗುವಿನ ಹಾಲಿನ ಬಾಟಲಿ, ಚಪ್ಪಲಿಗಳು ಸಿಕ್ಕಿದ್ದವು. ಹಾಗಾಗಿ ಮಕ್ಕಳು ಬದುಕಿರಬಹುದು ಎನ್ನುವ ನಂಬಿಕೆಯೊಂದಿಗೆ ಹುಡುಕಾಟ ಮುಂದುವರೆಸಿದ್ದರು.
ಇನ್ನು ಆ ಮಹಿಳೆಯ ದೊಡ್ಡ ಮಗನಿಗೆ 13 ವರ್ಷ. ಎರಡನೆಯದ್ದಕ್ಕೆ 9 ವರ್ಷ, ಮೂರನೆಯದ್ದು 4 ವರ್ಷದ್ದು. ನಾಲ್ಕನೇದು ಒಂದು ವರ್ಷದ ಕಂದಮ್ಮ!
ಮಕ್ಕಳ ಅಜ್ಜಿಯ ಧ್ವನಿ ದಾಖಲಿಸಿ, ಮಕ್ಳೇ ಎಲ್ಲೂ ಹೋಗ್ಬೇಡಿ, ಅಲ್ಲೇ ಇರಿ ಎನ್ನುವ ಕೂಗನ್ನು ದೊಡ್ಡದಾಗಿ ಕಾಡೊಳಗೆ ಹರಿಯಬಿಡುತ್ತಾರೆ. ನಲುವತ್ತು ದಿನಗಳಾದವು. ಈ ಆ ನಾಲ್ಕೂ ಮಕ್ಕಳು ಅಮೆಜಾನ್ ಎಂಬ ದಟ್ಟಡವಿಯೊಳಗೆ ಪತ್ತೆಯಾಗಿದ್ದು, ಮಕ್ಕಳ ಜೊತೆ ಇರುವ ಫೋಟೋಗಳನ್ನು ಮಿಲಿಟರಿ ಪ್ರಕಟಿಸಿದೆ.