ನೈಜೀರಿಯಾ, ಜೂ 14 (DaijiworldNews/MS): ಆಫ್ರಿಕಾದ ಉತ್ತರ ನೈಜೀರಿಯಾದಲ್ಲಿ ಭೀಕರ ದೋಣಿ ದುರಂತದಲ್ಲಿ ಮಕ್ಕಳು ಸೇರಿ 103 ಮಂದಿ ಮೃತಪಟ್ಟ ಘಟನೆ ನಡೆದಿದೆ.
ಉತ್ತರ ನೈಜೀರಿಯಾ ಕ್ವಾರಾ ರಾಜ್ಯದ ಪಟೇಗಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ದೋಣಿಯಲ್ಲಿ ಸುಮಾರು 300 ಮಂದಿ ಕಿಕ್ಕಿರಿದು ಸೇರಿದ್ದರು. ಮದುವೆಯಲ್ಲಿ ಭಾಗವಹಿಸಿದ್ದ ಅತಿಥಿಗಳು ನೈಜರ್ ನದಿಯನ್ನು ದಾಟಲು ಇಗ್ಬೋಟಿ ಗ್ರಾಮದಿಂದ ದೋಣಿ ಹತ್ತಿದ್ದಾರೆ. ಮೋಟಾರು ಸೈಕಲ್ ಗಳಲ್ಲಿ ಸಮಾರಂಭಕ್ಕೆ ಆಗಮಿಸಿದ ಅವರು, ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿದ ನಂತರ ಸ್ಥಳೀಯವಾಗಿ ತಯಾರಿಸಿದ ದೋಣಿಯಲ್ಲಿ ತೆರಳಿದ್ದರು.
ನೈಜರ್ ನದಿಗೆ ಬಿದ್ದಿರುವ ಜನರನ್ನು ಸ್ಥಳೀಯರು ಮತ್ತು ಪೊಲೀಸರು ಸೇರಿ ಹುಡುಕುತ್ತಿದ್ದಾರೆ. ಇದುವರೆಗೆ 100 ಜನರನ್ನು ರಕ್ಷಣೆ ಮಾಡಲಾಗಿದೆ. ಸೋಮವಾರ ಬೆಳಗಿನ ಜಾವ ಮೂರರಿಂದ ನಾಲ್ಕರ ನಡುವೆ ಈ ಅವಘಡ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ ದೋಣಿಯು ನೀರಿನಲ್ಲಿದ್ದ ಒಂದು ದೊಡ್ಡ ಮರದ ಕಾಂಡಕ್ಕೆ ಢಿಕ್ಕಿ ಹೊಡೆದು ಎರಡು ಭಾಗವಾಯಿತು ಎಂದು ವರದಿಯಾಗಿದೆ