ಲಂಡನ್, ಜೂ 14 (DaijiworldNews/HR): ಲಂಡನ್ನ ವೆಂಬ್ಲಿನಲ್ಲಿ ಹೈದರಾಬಾದ್ನ ಯುವತಿಯನ್ನು ಬ್ರೆಜಿಲ್ನ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಉನ್ನತ ವ್ಯಾಸಂಗಕ್ಕಾಗಿ ಲಂಡನ್ಗೆ ತೆರಳಿದ್ದ ತೇಜಸ್ವಿನಿ ರೆಡ್ಡಿ ಎಂಬ ಯುವತಿಗೆ ಬ್ರೆಜಿಲ್ನ ವ್ಯಕ್ತಿಯೊಬ್ಬ ವಸತಿಗೃಹದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಇನ್ನು ಆತ 28 ವರ್ಷ ವಯಸ್ಸಿನ ಇನ್ನೊಬ್ಬ ಯುವತಿಗೂ ಚಾಕುವಿನಿಂದ ಇರಿದು ಗಾಯ ಮಾಡಲಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸರು ಹೇಳಿದ್ದಾರೆ.
24 ವರ್ಷದ ಯುವಕ ಮತ್ತು 23 ವರ್ಷದ ಯವತಿಯನ್ನ ಈ ಘಟನೆಗೆ ಸಂಬಂಧಿಸಿದಂತೆ ಘಟನಾ ಸ್ಥಳದಲ್ಲಿ ಬಂಧಿಸಲಾಗಿದೆ.