ವಾಷಿಂಗ್ಟನ್, ಜೂ 20 (DaijiworldNews/MS):ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಜನರನ್ನು ಕರೆದೊಯ್ಯಲು ಬಳಸಲಾಗುವ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ.
ಜಲಾಂತರ್ಗಾಮಿ ಭಾನುವಾರ ಡೈವಿಂಗ್ ಆರಂಭಿಸಿದ ಎರಡು ಗಂಟೆಯೊಳಗೆ ನಾಪತ್ತೆಯಾಗಿದೆ. ಅದರಲ್ಲಿ 70 ಗಂಟೆಗಳ ಆಮ್ಲಜನಕ ಮಾತ್ರ ಉಳಿದುಕೊಂಡಿದೆ. ಹೀಗಾಗಿ ಸಮರೋಪಾದಿ ಸಬ್ಮರಿನ್ ಹುಟುಗಾಟ ನಡೆಸುತ್ತಿದ್ದಾರೆ.
ಕಂಪನಿಯ ವೆಬ್ಸೈಟ್ ಪ್ರಕಾರ ಜಲಾಂತರ್ಗಾಮಿ 10,432 ಕೆಜಿ ಮತ್ತು , 13,100 ಅಡಿಗಳಷ್ಟು ಆಳವನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಜಲಾಂತರ್ಗಾಮಿ ನೌಕೆಯು ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಐದು ಸದಸ್ಯರನ್ನು ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಸಬ್ಮರಿನ್ ಐದು ಜನರಲ್ಲಿ ಒಬ್ಬ ಬ್ರಿಟಿಷ್ ಬಿಲಿಯನೇರ್ ಕೂಡ ಸೇರಿದ್ದಾರೆ ಎನ್ನಲಾಗಿದೆ ನಾಪತ್ತೆಯಾಗಿರುವ ಸಬ್ಮರಿನ್ ಪತ್ತೆ ಹಚ್ಚಲು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.