ಆಮಸ್ಟರ್ಡಾಂ, ಜು 07 (DaijiworldNews/HR): ಸಿಂಧೂ ನದಿ ಕಣಿವೆಯಲ್ಲಿನ ಜಲ ವಿದ್ಯುತ್ ಯೋಜನೆ ಸಂಬಂಧಿಸಿದಂತೆ ಪಾಕಿಸ್ತಾನ ನೀಡಿದ್ದ ದೂರು ವಿರುದ್ದ ಭಾರತ ಎತ್ತಿದ್ದ ಆಕ್ಷೇಪಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯ ತಿರಸ್ಕರಿಸಿದೆ ಎಂದು ವರದಿಯಾಗಿದೆ.
ಸಿಂಧೂ ನದಿ ಕಣಿವೆಯಲ್ಲಿ ಭಾರತ ಕೈಗೊಂಡಿರುವ ಜಲವಿದ್ಯುತ್ ಯೋಜನೆ ಬಗ್ಗೆ ಪಾಕಿಸ್ತಾನ ಅಪಸ್ವರ ಎತ್ತಿದ್ದು, ಭಾರತದ ಈ ಯೋಜನೆಯಿಂದ ಸದ್ಯ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಲಿದೆ ಎಂದು ಹೇಳಿತ್ತು.
ಇನ್ನು ಭಾರತದ ಯೋಜನೆಯಿಂದ ತೊಂದರೆಯಾಗಲಿದ್ದು, ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯ ಮಧ್ಯಸ್ಥಿಕೆ ವಹಿಸಬೇಕು ಎಂದು ಪಾಕಿಸ್ತಾನ ಮನವಿ ಮಾಡಿತ್ತು.
ಹೀಗಾಗಿ ವಿಶ್ವಬ್ಯಾಂಕ್ ಸಿಂಧೂ ನದಿ ಒಪ್ಪಂದದ ಅಧ್ಯಯನಕ್ಕೆ ತಟಸ್ಥ ತಜ್ಞರ ಸಮಿತಿಯನ್ನು ರಚಿಸಿದ್ದು, ಇದೀಗ ಭಾರತ ಎತ್ತಿರುವ ಆಕ್ಷೇಪಣೆಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.