ನ್ಯೂಜಿಲೆಂಡ್, ಜು 20 (DaijiworldNews/HR): ಜುಲೈ 20 ರಿಂದ 32 ದೇಶಗಳ ಮಹಿಳಾ ತಂಡಗಳ ನಡುವೆ ಫಿಫಾ ವಿಶ್ವಕಪ್ ಆರಂಭವಾಗಲಿದ್ದು, ಮೊದಲ ಪಂದ್ಯಕ್ಕಾಗಿ ಆಕ್ಲೆಂಡ್ನ ಹೋಟೆಲ್ನಲ್ಲಿ ಮಹಿಳಾ ತಂಡಗಳು ತಂಗಿದ್ದು, ಆ ಹೋಟೆಲ್ ಬಳಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ ಬಂದೂಕುಧಾರಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ವಾಸ್ತವವಾಗಿ ಇಂದಿನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಹಾಗೂ ನಾರ್ವೆ ತಂಡಗಳು ಆಕ್ಲೆಂಡ್ನಲ್ಲಿ ಮುಖಾಮುಖಿಯಾಗುತ್ತಿದ್ದು, ಹೀಗಾಗಿ ನಾರ್ವೆ ತಂಡ ಆಕ್ಲೆಂಡ್ನಲ್ಲಿ ವಾಸ್ತವ್ಯ ಹೂಡಿದೆ. ಇದೀಗ ನಾರ್ವೆ ತಂಡ ತಂಗಿರುವ ಹೋಟೆಲ್ನಿಂದ ಕೇವಲ 300 ಮೀಟರ್ ದೂರದಲ್ಲಿ ಈ ಅವಘಡ ಸಂಭವಿಸಿದೆ.
ಘಟನೆಯ ಕುರಿತು ಮಾತನಾಡಿರುವ ನಾರ್ವೆ ತಂಡದ ನಾಯಕಿ ಮಾರೆನ್ ಮ್ಜೆಲ್ಡೆ, ಮೊದಲಿಗೆ ಏನು ನಡೆಯುತ್ತಿದೆ ಎಂದು ನಮಗೆ ತಿಳಿದಿರಲಿಲ್ಲ. ಆದರೆ ಅಂತಿಮವಾಗಿ ಟಿವಿ ಮತ್ತು ಸ್ಥಳೀಯ ಮಾಧ್ಯಮಗಳಲ್ಲಿ ಘಟನೆಯ ಬಗ್ಗೆ ಮಾಹಿತಿ ತಿಳಿದುಕೊಂಡೆವು ಎಂದಿದ್ದಾರೆ.
ಇನ್ನು ಘಟನೆ ನಡೆದ ಬಳಿಕ ನಾರ್ವೆ ತಂಡವನ್ನು ಹೆಲಿಕಾಪ್ಟರ್ ಮೂಲಕ ಬೇರೆ ಹೋಟೆಲ್ಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.