ವಾಷಿಂಗ್ಟನ್, ಜು 24 (DaijiworldNews/AK):ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ನ ಲೋಗೋ ಇದೀಗ ಅಧಿಕೃತವಾಗಿ ಬದಲಾವಣೆಯಾಗಿದೆ. ಇದೀಗ ಬ್ಲೂ ಬರ್ಡ್ ಬದಲು ಎಕ್ಸ್ (X) ಲೋಗೋ ಕಾಣಿಸಿಕೊಳ್ಳುತ್ತಿದೆ.
ಟ್ವಿಟ್ಟರ್ ಅನ್ನು ಖರೀದಿಸಿರುವ ಎಲೋನ್ ಮಸ್ಕ್ ಅಪ್ಲಿಕೇಶನ್ ಅನ್ನು ರೀಬ್ರ್ಯಾಂಡ್ ಮಾಡುವ ಉದ್ದೇಶದಿಂದ ಅದರ ಲೋಗೋ ಹಾಗೂ ಹೆಸರನ್ನು ಬದಲಿಸಲು ಮುಂದಾಗಿದ್ದಾರೆ. ಎಲೋನ್ ಮಸ್ಕ್ ಸೋಮವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟ್ಟರ್ನ ಪ್ರಧಾನ ಕಚೇರಿಯಲ್ಲಿ ಎಕ್ಸ್ (x)ಬ್ರ್ಯಾಂಡಿಂಗ್ನ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
ಈ ಹಿಂದೆಯೇ Twitter Inc. ಅನ್ನು X Corp. ನೊಂದಿಗೆ ವಿಲೀನ ಮಾಡಲಾಗಿದೆ. ಇದೀಗ ಟ್ವಿಟ್ಟರ್ನ ಲೋಗೋ ಬದಲಾಗಿದೆ. ಮಂದೆ ಟ್ವಿಟ್ಟರ್ ಎಕ್ಸ್ ಹೆಸರಿನಲ್ಲಿಯೇ ಮುಂದುವರಿಯಲಿದೆ