ಪ್ಯಾರಿಸ್, ಆ 13 (DaijiworldNews/AK): ವಿಶ್ವದ ಪ್ರವಾಸಿ ತಾಣಗಳಲ್ಲಿ ಐಫೆಲ್ ಟವರ್ ಕೂಡ ಒಂದು. ವಿಶ್ವವಿಖ್ಯಾತ ಐಫೆಲ್ ಟವರ್ಗೂ ಕಂಟಕ ಎದುರಾಗಿದೆ.
ಇದೀಗ ಐಫೆಲ್ ಟವರ್ಗೆ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಫ್ರೆಂಚ್ ಪೊಲೀಸರು ತಿಳಿಸಿದ್ದಾರೆ. ಬಾಂಬ್ ಬೆದರಿಕೆ ಕರೆ ಬರುತ್ತಿದ್ದಂತೆ ಐಫೆಲ್ ಟವರ್ ವೀಕ್ಷಣೆಗೆ ಬಂದಿದ್ದ ಪ್ರವಾಸಿರನ್ನು ಸ್ಥಳಾಂತರ ಮಾಡಲಾಗಿದ್ದು, ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಒಂದು ವರ್ಷದಲ್ಲೇ 60 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ವಿಶ್ವವಿಖ್ಯಾತ ಐಫೆಲ್ ಟವರ್ ವೀಕ್ಷಣೆ ಮಾಡಿದ್ದರು. ಈಗ ಅಲ್ಲಿ ಭದ್ರತಾ ಎಚ್ಚರಿಕೆ ವಹಿಸಲಾಗಿದೆ. ಬಾಂಬ್ ವಿಲೇವಾರಿ ತಜ್ಞರು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶೋಧನೆ ನಡೆಸುತ್ತಿದ್ದಾರೆ ಎಂದು ತಿಳಿಸಲಾಗಿದೆ.
ಫ್ರಾನ್ಸ್ನ ಕೈಗಾರಿಕಾ ಕೌಶಲ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ ಈ ಗೋಪುರವನ್ನು ನಿರ್ಮಿಸಲಾಯಿತು. ಬಳಿಕ ಐಫೆಲ್ ಟವರ್ನ್ನು ಮಾರ್ಚ್ 31, 1889 ರಲ್ಲಿ ಸಾರ್ವಜನಿಕಗೊಳಿಸಲಾಯಿತು.