ಬ್ಯೂನಸ್ ಐರಿಸ್, ಸೆ 03 (DaijiworldNews/AK): ಪ್ಲಾಸ್ಟಿಕ್ ಸರ್ಜರಿ ಒಳಗಾಗಿದ್ದ ಖ್ಯಾತ ನಟಿ, ರೂಪದರ್ಶಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅರ್ಜೆಂಟೀನಾದ ನಟಿ, ರೂಪದರ್ಶಿ ಮತ್ತು ಟಿವಿ ನಿರೂಪಕಿ ಸಿಲ್ವಿನಾ ಲೂನಾ (43) ಪ್ಲ್ಯಾಸ್ಟಿಕ್ ಸರ್ಜರಿಯಿಂದ ಉಂಟಾದ ಅಡ್ಡ ಪರಿಣಾಮದಿಂದ ಸಾವನ್ನಪ್ಪಿದ್ದಾರೆ.
2011 ರಲ್ಲಿ ಸಿಲ್ವಿನಾ ಬ್ಯಾಕ್ ಸರ್ಜರಿಗೆ ಒಳಗಾಗಿದ್ದರು. ಇದಾದ ಬಳಿಕ ಅವರಿಗೆ ಕಿಡ್ನಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು.ಇದರಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. 2015 ರಿಂದ ಅವರಿಗೆ ವಾರಕ್ಕೊಮ್ಮೆ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿತ್ತು.
ಹೈಪರ್ಕಾಲ್ಸೆಮಿಯಾದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಒಟ್ಟು 79 ದಿನಗಳು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿ ತಿಳಿಸಿದೆ.
ಆದರೆ ಇತ್ತೀಚೆಗೆ ಅವರ ಆರೋಗ್ಯ ಹದಗೆಟ್ಟಿದ್ದು, ವೆಂಟಿಲೇಟರ್ ಸಪೋರ್ಟ್ ನಲ್ಲಿ ಅವರನ್ನು ಇರಿಸಲಾಗಿತ್ತು. ಅವರ ಕುಟುಂಬದವರ ಸೂಚನೆಯಂತೆ ಅವರ ವೆಂಟಿಲೇಟರ್ ಬೆಂಬಲವನ್ನು ಆಗಸ್ಟ್ 31 ರಂದು ತೆಗೆಯಲಾಗಿದೆ.