ಇಸ್ಲಾಮಾಬಾದ್, ಸೆ 11 (DaijiworldNews/HR): ‘ಪಾಕಿಸ್ತಾನದ ಗಡಿ ಪ್ರದೇಶವನ್ನು ತಾಲಿಬಾನ್ ಆಡಳಿತವು ಆಕ್ರಮಿಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
ತಾಲಿಬಾನ್ ಆಡಳಿತವು ಕಾನೂನು ಬಾಹಿರವಾಗಿ ಕೆಲ ಕಟ್ಟಡಗಳನ್ನು ನಿರ್ಮಿಸುತ್ತಿದ್ದು, ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ಪಾಕ್ ಆರೋಪಿಸಿದೆ.
ಇನ್ನು ಪಾಕಿಸ್ತಾನ ಹಾಗೂ ಆಫ್ಗಾನಿಸ್ತಾನ ನಡುವಿನ ತೋರ್ಖಂ ಗಡಿ ಪ್ರದೇಶದ ಬಳಿ ಕಳೆದ ಒಂದು ವಾರದಿಂದ ಈ ಪರಿಸ್ಥಿತಿ ಇದ್ದು, ಬುಧವಾರದಿಂದ ಈ ಪ್ರದೇಶವನ್ನು ಮುಚ್ಚಲಾಗಿದೆ. ಸಾವಿರಾರು ಸಂಖ್ಯೆಯ ಪ್ರವಾಸಿಗರು ಮುಂದೆ ಸಾಗಲಾಗದೆ ಗಡಿ ಪ್ರದೇಶದಲ್ಲೇ ಇದ್ದಾರೆ ಎಂದು ಪಾಕ್ ಹೇಳಿದೆ.