ವಾಶಿಂಗ್ಟನ್, ಎ12(AZM): ಉತ್ತರ ಕೊರಿಯದ ವಿರುದ್ಧ ವಿಧಿಸಲಾಗಿರುವ ಆರ್ಥಿಕ ದಿಗ್ಬಂಧನಗಳು ಮುಂದುವರಿಸಲಿದ್ದು, ಈ ದಿಗ್ಬಂಧನಗಳನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿಲ್ಲ ಎಂದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶ್ವೇತಭವನದಲ್ಲಿ ದಕ್ಷಿಣ ಕೊರಿಯ ಅಧ್ಯಕ್ಷ ಮೂನ್ ಜೇ-ಇನ್ ಜೊತೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ''ಆರ್ಥಿಕ ದಿಗ್ಬಂಧನಗಳು ಮುಂದುವರಿಯಬೇಕೆಂದು ನಾವು ಬಯಸುತ್ತೇವೆ'' ಎಂಬುದಾಗಿ ಹೇಳಿದ್ದಾರೆ.
ಉತ್ತರ ಕೊರಿಯ ವಿರುದ್ಧದ ದಿಗ್ಬಂಧನಗಳು ಈಗ ನ್ಯಾಯೋಚಿತ ಮಟ್ಟದಲ್ಲಿವೆ ಎಂದು ಹೇಳಿದ ಟ್ರಂಪ್, ''ಮಹತ್ವದ ಘಟನೆಯೊಂದು ನಡೆಯುತ್ತದೆ ಎಂದು ನಾನು ಭಾವಿಸಿದ್ದೇನೆ. ದಿಗ್ಬಂಧನಗಳನ್ನು ನಾವು ಹೆಚ್ಚಿಸಬಹುದು, ಆದರೆ, ನಾನು ಹಾಗೆ ಮಾಡಲು ಇಚ್ಛಿಸುವುದಿಲ್ಲ'' ಎಂದರು.