ಒಟ್ಟಾವಾ, ಅ 07 (DaijiworldNews/HR): ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಇಬ್ಬರು ಭಾರತೀಯರು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಅವಳಿ ಎಂಜಿನ್ನ ಲಘು ಪೈಪರ್ ಪಿಎ-34 ಸೆನೆಕಾ ವಿಮಾನವು ಮೋಟೆಲ್ ಬಳಿ ಮರಗಳು ಮತ್ತು ಪೊದೆಗಳಿಗೆ ಅಪ್ಪಳಿಸಿತು ಎಂದು ವರದಿಯಾಗಿದೆ.
ಇನ್ನು ವ್ಯಾಂಕೋವರ್ ನಿಂದ ಪೂರ್ವಕ್ಕೆ 100 ಕಿಲೋಮೀಟರ್ ದೂರದಲ್ಲಿರುವ ಚಿಲ್ಲಿವಾಕ್ ನ ಸ್ಥಳೀಯ ವಿಮಾನ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದೆ.
ಪೈಲಟ್ ಮತ್ತು ಇತರ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.