ಇಸ್ರೇಲ್, ,ಅ 08 (DaijiworldNews/AK):ಹಮಾಸ್ ಉಗ್ರರು ಇಸ್ರೇಲ್ನಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, ಇದೀಗ ಯುವತಿಯೊಬ್ಬಳನ್ನು ಅಪಹರಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ ಯುವತಿ ನನ್ನನ್ನು ಕೊಲ್ಲಬೇಡಿ ಎಂದು ಅಳುತ್ತಾ ಕೂಗುತ್ತಿರುವ ದೃಶ್ಯ ಮನಕಲಕುವಂತಿದೆ. ಈ ವೀಡಿಯೋವನ್ನು ಹೆನ್ಸ್ ಮಜೀಗ್ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅವನು ನಿಮ್ಮ ಮಗಳು, ಸಹೋದರಿ, ಗೆಳತಿಯೂ ಆಗಿರಬಹುದು ಎಂದು ಬರೆದುಕೊಂಡಿದ್ದಾರೆ.
ಹಮಾಸ್ ಉಗ್ರರು ಯುವತಿಯನ್ನು ಅಪಹರಿಸಿ ಬೈಕಿನಲ್ಲಿ ಮಧ್ಯದಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ಯುವತಿ ನನ್ನನ್ನು ಕೊಲೆ ಮಾಡಬೇಡಿ, ನನ್ನನ್ನು ಕಾಪಾಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುವ ದೃಶ್ಯವನ್ನು ಕೂಡ ನಾವು ಕಾಣಬಹುದಾಗಿದೆ.
ಇಸ್ರೇಲ್ನಲ್ಲಿ ಫೀಸ್ ಮ್ಯೂಸಿಕ್ ಹಬ್ಬ ನಡೆಯುತ್ತಿತ್ತು. ಈ ಹಬ್ಬದಲ್ಲಿ ಯುವತಿ ನೋವಾ ಪಾಲ್ಗೊಂಡಿದ್ದರು. ಅಲ್ಲಿಂದ ಹಮಾಸ್ ಉಗ್ರರು ಆಕೆಯನ್ನು ಕಿಡ್ನಾಪ್ ಮಾಡಿ ಇಸ್ರೇಲ್ನಿಂದ ಗಾಜಾಕ್ಕೆ ಎಳೆದುಕೊಂಡು ಹೋಗಿ, ಒತ್ತೆಯಾಳಾಗಿರಿಸಿ ಕೊಂಡಿದ್ದಾರೆ.
ವೀಡಿಯೋ ನೋಡಿ ಅನೇಕರು ಇವರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆ ಮಕ್ಕಳ ಮೇಲೆ ಈ ರೀತಿಯಾಗಿ ಉಗ್ರರು ನಡೆದುಕೊಳ್ಳುವುದು ಸರಿಯಲ್ಲ ಎಂದು ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.