ಇಸ್ರೇಲ್, ಅ 22 (DaijiworldNews/AK/MR): ಹಮಾಸ್ ಉಗ್ರರು ಮಸೀದಿಯನ್ನು ತಮ್ಮ ನೆಲೆಯಾಗಿ ಬಳಸಿಕೊಂಡು ಇಸ್ರೇಲ್ ಮೇಲೆ ದಾಳಿ ಮಾಡುತ್ತಿದ್ದರು. ಸೇನೆ ಮಸೀದಿಯ ಮೇಲೆ ವೈಮಾನಿಕ ದಾಳಿ ನಡೆಸಿ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.
ಗಾಜಾದ ಪಶ್ಚಿಮ ದಂಡೆಯಲ್ಲಿರುವ ಜೆನಿನ್ ನಗರದ ಅಲ್-ಅನ್ಸಾರ್ ಮಸೀದಿ ಸಂಕೀರ್ಣದ ಮೇಲೆ ಇಸ್ರೇಲಿ ಸೇನೆಯು ವೈಮಾನಿಕ ದಾಳಿ ನಡೆಸಿತು.
ವೆಸ್ಟ್ ಬ್ಯಾಂಕ್ನ ಜೆನಿನ್ನಲ್ಲಿರುವ ಅಲ್-ಅನ್ಸಾರ್ ಮಸೀದಿಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ನ ಉಗ್ರಗಾಮಿಗಳು ಹತರಾಗಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
ದಾಳಿಯ ಯೋಜನೆಗೆ ಉಗ್ರರು ಮಸೀದಿಯನ್ನು ತಮ್ಮ ಕಮಾಂಡ್ ಸೆಂಟರ್ ಆಗಿ ಬಳಸಿಕೊಂಡಿದ್ದರು. ಆದ್ದರಿಂದ, ಮಸೀದಿಯನ್ನು ಗುರಿಯಾಗಿಟ್ಟುಕೊಂಡು ಧ್ವಂಸಗೊಳಿಸಲಾಯಿತು.
ದಾಳಿಯಲ್ಲಿ ಹತರಾದ ಭಯೋತ್ಪಾದಕರು ಕಳೆದ ತಿಂಗಳಿನಿಂದ ಹಲವಾರು ದಾಳಿಗಳನ್ನು ನಡೆಸಿದ್ದರು ಮತ್ತು ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಯೋಜನೆಗಳನ್ನು ರೂಪಿಸಿದ್ದರು ಎಂದು ವರದಿಯಾಗಿದೆ.
ಆದರೆ ಇಸ್ರೇಲಿ ಸೇನೆಯು ಸತ್ತವರ ನಿಖರ ಸಂಖ್ಯೆಯಾಗಲಿ, ಗುರುತನ್ನು ಬಹಿರಂಗಪಡಿಸಿಲ್ಲ. ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಸಂಘರ್ಷ ಅಕ್ಟೋಬರ್ 7 ರಂದು ಪ್ರಾರಂಭವಾಗಿದ್ದು,, ಗಾಜಾದಲ್ಲಿ ಸುಮಾರು 4,300 ಜನರು ಮತ್ತು ಇಸ್ರೇಲ್ನಲ್ಲಿ ಸರಿಸುಮಾರು 1,400 ಜನರು ಸಾವನ್ನಪ್ಪಿದ್ದಾರೆ.