ಇಸ್ರೇಲ್,ಅ 28 (DaijiworldNews/AK): ಇಸ್ರೇಲ್ ಸೇನೆ ಹಮಾಸ್ ಸುರಂಗ ನೆಲೆಗಳ ಮೇಲೆ ದಾಳಿ ನಡೆಸಿದೆ. ಇಸ್ರೇಲ್ನ , ಯುದ್ಧ ಎಂಜಿನಿಯರಿಂಗ್ ಪಡೆಗಳು ಮತ್ತು ಟ್ಯಾಂಕ್ಗಳು ಗಾಜಾ ಪಟ್ಟಿಯೊಳಗೆ ನೆಲೆ ನಿಂತಿದೆ. ಈಗಾಗಲೇ ಗಾಜಾ ಪಟ್ಟಿಯ ಸುತ್ತ ಇಸ್ರೇಲ್ ಸೇನೆ ಸುತ್ತುವರಿದಿದೆ.
ಇಸ್ರೇಲ್ನ ಐ ಡಿಎಫ್ ಫೈಟರ್ ಜೆಟ್ಗಳು ಟುನೈಟ್ ಉತ್ತರ ಗಾಝಾ ಸ್ಟ್ರಿಪ್ನಲ್ಲಿ ಸುಮಾರು 150 ಹಮಾಸ್ ಉಗ್ರರನ್ನು ಹತ್ಯೆ ಮಾಡಿದೆ ಎನ್ನಲಾಗಿದೆ.ಇಸ್ರೇಲ್ ಈ ಹಿಂದೆ ಹಮಾಸ್ ಸಂಘಟನೆಯನ್ನು ನಿರ್ಮೂಲನೆ ಮಾಡುವುದಾಗಿ ಹೇಳಿತ್ತು. ಇದೀಗ ಹಮಾಸ್ ತಾಣಗಳು, ಸುರಂಗ, ಇತರ ತಾಣಗಳನ್ನು ನಾಶ ಮಾಡುತ್ತಿದೆ.
ಇಸ್ರೇಲಿ ಫೈಟರ್ ಜೆಟ್ಗಳು ಹಮಾಸ್ನ ಏರಿಯಲ್ ಅರೇ ಮುಖ್ಯಸ್ಥ ಅಸೆಮ್ ಅಬು ರಕಾಬಾ ಅವರ ಮೇಲೂ ದಾಳಿ ಮಾಡಿತ್ತು. ಹಮಾಸ್ನ ಡ್ರೋನ್ಗಳು, ಪ್ಯಾರಾಗ್ಲೈಡರ್ಗಳು, ವೈಮಾನಿಕ ಪತ್ತೆ ಮತ್ತು ರಕ್ಷಣೆಯ ಜವಾಬ್ದಾರಿಯನ್ನು ಅಬು ರಕಾಬಾ ವಹಿಸಿದ್ದರು.ಅ. 7ರಂದು ನಡೆದ ಹಮಾಸ್ ದಾಳಿಯ ಹಿಂದೆ ಅಸೆಮ್ ಅಬು ರಕಾಬಾ ಅವರ ಕೈವಾಡ ಇದೆ ಎಂದು ಹೇಳಲಾಗಿದೆ.