ನೇಪಾಳ, ನ 4 (DajiiworldNews/PC): ನೇಪಾಳದ ಕಠ್ಮಂಡು ಹಲವೆಡೆ ಭೀಕರ ಭೂಕಂಪ ಉಂಟಾಗಿದ್ದು 128 ಮಂದಿ ಮೃತಪಟ್ಟಿದ್ದಾರೆ.
ಭೂಕಂಪದ ಕೇಂದ್ರ ಬಿಂದು ನೇಪಾಳದ ಜಜರ್ಕೋಟ್ ಜಿಲ್ಲೆಯ ಲಾಮಿಡಾಂಡಾ ಪ್ರದೇಶದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಅಧಿಕಾರಿಗಳ ಹೇಳಿದ್ದಾರೆ
ನೇಪಾಳ ಮಾತ್ರವಲ್ಲದೇ ದೆಹಲಿ-ಎನ್ಸಿಆರ್ ಪ್ರದೇಶ, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಹಲವೆಡೆ ಕಂಪನದ ಅನುಭವವಾಗಿದೆ.
ಜಜರ್ಕೋಟ್ನಲ್ಲಿ ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು, ಜಜರ್ಕೋಟ್ ಡೆಪ್ಯುಟಿ ಮೇಯರ್ ಕೂಡ ಮೃತಪಟ್ಟಿದ್ದಾರೆ. ಪಶ್ಚಿಮ ರುಕುಂ ಜಿಲ್ಲೆಯಲ್ಲಿ 36 ಜನ, ಜಾಜರಕೋಟ್ನಲ್ಲಿ 34 ಜನ ಸಾವನ್ನಪ್ಪಿದ್ದು, ಒಟ್ಟಾರೆಯಾಗಿ 129 ಮಂದಿಯನ್ನು ಭೂಕಂಪವು ಬಲಿ ಪಡೆದುಕೊಂಡಿದೆ.